ಬಾಲಬಿಚ್ಚಿದರೆ ಹುಷಾರ್: ಪುಡಿರೌಡಿಗಳಿಗೆ ಎಸ್ಪಿ ಎಚ್ಚರಿಕೆ

ಬುಧವಾರ, 4 ಏಪ್ರಿಲ್ 2018 (15:30 IST)
ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ರೌಡಿಗಳ ಪರೇಡ್ ನಡೆಸಿದರು.  
ಕೈಯಲ್ಲಿ ದಾರ, ಕೊರಳಲ್ಲಿ  ದೊಡ್ಡ ದೊಡ್ಡ ಚೈನ್ ಹಾಕಿದ ರೌಡಿಗಳಿಗ ಲಾಠಿ ರುಚಿ ತೋರಿಸಿದ ಎಸ್ಪಿ, ಚೈನ್, ದಾರಗಳನ್ನು ತೆಗೆದು ಹಾಕಿದರು. ಇನ್ನು ರೌಡಿಗಳೆಂದು ತೋರಿಸಿಕೊಳ್ಳಲು ತಲೆ ಮೇಲೆ ವಿಚಿತ್ರವಾಗಿ ಉದ್ದುದ್ದಾಗಿ ಕೂದಲು  ಬಿಟ್ಟಿದ್ದ ರೌಡಿಗಳ ಹೇರ್ ಸ್ಟೈಲ್ ಚೆಂಜ್ ಮಾಡಿಸಿದರು.  ಪೊಲೀಸ್ ಪರೇಡ್ ಮೈದಾನಕ್ಕೇ ಕ್ಷೌರಿಕರನ್ನು ಕರೆಸಿ, ರೌಡಿಗಳ ಹೇರ್ ಸ್ಟೈಲ್ ಗೆ ಕತ್ತರಿ ಹಾಕಿಸಿದರು.
 
ಬಾಲ ಬಿಚ್ಚಿದರೆ ಹುಷಾರ್...!: 
 
ಬಿಸಿಲುನಾಡು ಖ್ಯಾತಿಯ ಕಲಬುರಗಿ ಜಿಲ್ಲಾದ್ಯಂತ 3800 ರೌಡಿಗಳಿದ್ದಾರೆ. ಮಹಾನಗರದಲ್ಲಿ 800ಕ್ಕಿಂತ ಹೆಚ್ಚು ಜನರಿದ್ದಾರೆ. ಅವರಲ್ಲಿ 300 ಜನ ರೌಡಿಗಳ ಪರೇಡ್ ನಡೆಸಿದ ಎಸ್ಪಿ, ಟ್ಯಾಟೂ ಹಾಕಿಕೊಂಡ ಮತ್ತು ಉದ್ದುದ್ದ ಕೂದಲು ಬಿಟ್ಟ ರೌಡಿಗಳಿಗೆ ಲಾಠಿ ರುಚಿ ತೋರಿಸಿದರು. 
 
ಟ್ಯಾಟೂ ಹಾಕಿಸಿಕೊಂಡವರಿಗೆ ಗದರಿಸಿ; ಕೈಯಲ್ಲಿ ಹಾಕಿಕೊಂಡ ದಾರ, ಚೈನ್ ಗಳನ್ನು ಕಸಿದುಕೊಂಡರು. ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗೆ ಮುಂದಾಗಿ ಬಾಲ ಬಿಚ್ಚಿದರೆ ಹುಷಾರ್ ಎಂದು ಖಡಕ್ ಎಚ್ಚರಿಕೆಯನ್ನು ಎಸ್ ಪಿ ಎನ್.ಶಶಿಕುಮಾರ್ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ