ಕೊಳ್ಳೇಗಾಲ ಉಪವಿಭಾಗಾಧಿಕಾರಿ ಪೌಜಿಯಾ ತರನುಮ್ ಅವಾಚ್ಯ ಶಬ್ದ ಬಳಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲದಲ್ಲಿ ನಡೆದ ಕುಮಾರ ಪರ್ವ ಸಮಾವೇಶಕ್ಕೆ ಬಂದಿದ್ದ 150 ದ್ವಿಚಕ್ರ ವಾಹನ, ಮಾಜಿ ಸಚಿವ ವಿಶ್ವನಾಥ್ ಕಾರು ಸೇರಿದಂತೆ ನಾಲ್ಕು ಕಾರುಗಳಿಗೆ ಅನುಮತಿ ಇಲ್ಲ ಎಂದು ವಶಕ್ಕೆ ಪಡೆದಿದ್ದ ರಿಟರ್ನಿಂಗ್ ಆಫೀಸರ್ಸ್ ವಿರುದ್ಧ ಗರಂ ಆಗಿದ್ದಾರೆ.
ವಶಕ್ಕೆ ತಗೊಂಡ ವಾಹನ ಬಿಡೋಕೆ ಎಷ್ಟೊತ್ತು ಬೇಕು? ಇಡೀ ರಾಜ್ಯಕ್ಕೆ ಒಂದು ರೂಲ್ಸ್ ಆದ್ರೆ ಕೊಳ್ಳೇಗಾಲಕ್ಕೆ ಒಂದು ರೂಲ್ಸಾ?ಮಾಜಿ ಸಚಿವರಿಗೆ ಒಂದು ಗೌರವ ಬೇಡ್ವಾ? ಮಾತಿನಿದ್ದಕ್ಕೂ ಉಪವಿಭಾಗಾಧಿಕಾರಿಯನ್ನು ಮನಬಂದಂತೆ ಏಕವಚನದಲ್ಲಿಯೇ ವಾಕ್‌ಪ್ರಹಾರ ನಡೆಸಿದ್ದಾರೆ.
ಕೊಳ್ಳೇಗಾಲದ ಉಪವಿಭಾಗಾಧಿಕಾರಿ ಕಚೇರಿ ಮುಂದೆಯೇ ಅವಾಚ್ಯ ಶಬ್ದಗಳಿಂದ ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವುದು ಮಾಧ್ಯಮಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.