ಪಿಒಪಿ ಗಣಪತಿ ಪ್ರತಿಷ್ಠಾನಕ್ಕೆ ಬೀಳುವುದೇ ಬ್ರೇಕ್?

ಗುರುವಾರ, 12 ಜುಲೈ 2018 (14:33 IST)
ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆ ಗಣೇಶನ ಮೂರ್ತಿ ಕಲಾವಿದರು ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಕಲಾವಿದರ ಬದುಕು ಇದೀಗ ಬೀದಿಗೆ ಬಂದಿದೆ.

ಹಾವೇರಿ ಜಿಲ್ಲೆ ಕಲಾವಿದರ ತವರೂರು. ಆದರೆ ವರ್ಷವೀಡಿ ಮಣ್ಣಿನ ಮೂರ್ತಿ ತಯಾರಿಕೆ ಮಾಡುವ ಕಾಯಕದಲ್ಲಿ ತೊಡಗಿರುವ ಬಡ ಕಲಾವಿದರು ಮಾತ್ರ ಇದೀಗ ಸಂಕಷ್ಟದಲ್ಲಿದ್ದಾರೆ. ಯಾಕಂದ್ರೆ ಹಾವೇರಿಯಲ್ಲಿ  ಪಿಓಪಿ ( ಪ್ಲಾಸ್ಟರ್ ಆಫ್ ಪ್ಯಾರಿಸ್) ನ ಗಣೇಶನ ಮೂರ್ತಿಯದ್ದೆ ಹಾವಳಿ. ಜಿಲ್ಲೆಯ ಕಲಾವಿದರ ಹೊಟ್ಟೆಯ ಮೇಲೆ ಹೊಡೆತ ಬೀಳುತ್ತಿರುವುದೇ ಪಿಓಪಿ ಗಣೇಶ ಮೂರ್ತಿಯಿಂದ ಬೇರೆ ರಾಜ್ಯದ ಜನ್ರು ಜಿಲ್ಲೆಗೆ ಬಂದು ಮಾತ್ರ ಮಾರಾಟ ಮಾಡ್ತಾರೆ. ಪಿಓಪಿ ಗಣೇಶನ ಮೂರ್ತಿ ಮಾಡಿ ಪರಿಸರ ಮಾಲಿನ್ಯ ಮಾಡುವುದರ ಜೊತೆಗೆ ಸ್ಥಳೀಯ ಕಲಾವಿದರ ಹೋಟ್ಟೆಯಮೇಲೆ ಹೊಡೆಯುತ್ತಿದ್ದಾರೆ.

ಕಳೆದವರ್ಷ ರಾಜ್ಯದ್ಯಾಂತ  ಪಿಓಪಿ ಗಣಪತಿಗಳು ಬ್ಯಾನ್ ಆದರೂ ಸಹ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಪಿಓಪಿ ಗಣಪತಿಗಳ ಪ್ರತಿಷ್ಠಾಪನೆ ಮಾತ್ರ ನಿಂತಿರಲಿಲ್ಲ‌. ಪರಿಸರ ಸ್ನೇಹಿ ಗಣಪತಿಗಳನ್ನ ಮಾರಾಟ ಮಾಡಲು ಅನುವು ಮಾಡಿಕೊಡಲಿ ಎನ್ನುವುದು ಮೂರ್ತಿ ಕಲಾವಿದರ ಆಶಯವಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ