ಹಂಪಿ ಉತ್ಸವ ಮುಂದೂಡಿಕೆ - ಜನರ ಹಿಡಿಶಾಪ
ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ರಾಜ್ಯ ಸರ್ಕಾರ ಮುಂದೂಡಿರುವುದಕ್ಕೆ ಅವಳಿ ಜಿಲ್ಲೆಯ ಜನರಿಗೆ ತೀವ್ರ ಬೇಸರ ಉಂಟಾಗಿದೆ. ಇತಿಹಾಸವನ್ನು ಹೇಳುವ, ಕರ್ನಾಟಕದ ಹಿರಿಮೆಯನ್ನು ಸಾರುವ ಹಂಪಿ ಉತ್ಸವಕ್ಕೆ ಪ್ರತಿ ಭಾರಿಯು ಏನಾದರು ಒಂದು ನೆಪ ಹೇಳಿ ಮುಂದೂಡುತ್ತಿರುವುದು ಸರಿಯಾದ ನಿರ್ಧಾರವಲ್ಲ ಎಂದು ಉತ್ತರ ಕರ್ನಾಟಕದ ಜನ ತೀವ್ರವಾಗಿ ಖಂಡಿಸುತ್ತಿದ್ದಾರೆ. ಶಿಲ್ಪಕಲೆಗಳ ನಾಡು, ವರ್ಲ್ಡ್ ಹೇರಿಟೇಜ್ ಸೆಂಟರ್ ಎಂದು ಪ್ರಸಿದ್ದಿಯಾಗಿರುವ ಹಂಪಿಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ. ಮೊನ್ನೆ ಜಿ-20 ಶೃಂಗಸಭೆಯು ಸಹ ಹಂಪಿಯಲ್ಲಿ ವೈಭವವಾಗಿ ನಡೆಯಿತು. ಇಲ್ಲಿಯ ಕಲಾಕೃತಿಗಳನ್ನು ನೋಡಿ ವಿದೇಶಿಗರು ಸಹ ಮೂಕವಿಸ್ಮಿತರಾದರು. ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಹಂಪಿ ಉತ್ಸವಕ್ಕೆ ಪ್ರತಿ ಬಾರಿಯು ಏನಾದರೂ ಒಂದು ನೆಪ ಹೇಳಿ ಮುಂದುಡೂತ್ತಿರುವುದು ಮಾತ್ರ ಸಾರ್ವಜನಿಕರಿಗೆ ಮತ್ತು ಕಲಾವಿದರಿಗೆ ಬೇಸರ ಉಂಟುಮಾಡುತ್ತಿದೆ. ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮೈಸೂರು ದಸರಾಕ್ಕೆ ಬಾರದ ಬರ, ಹಂಪಿ ಉತ್ಸವ ಆಚರಣೆಗೆ ಬಂತಾ, ಎಂದು ಸಾರ್ವಜನಿಕರು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.