ಕಬ್ಬು ಬೆಳೆಗಾರರಿಗೆ ಭಾರೀ ಮೊತ್ತದ ಹಣ ಬಾಕಿ ಉಳಿಸಿಕೊಂಡಿದ್ದಾರಾ ಈ ರಾಜಕಾರಣಿಗಳು?

ಶುಕ್ರವಾರ, 23 ನವೆಂಬರ್ 2018 (09:48 IST)
ಬೆಂಗಳೂರು: ಬಾಕಿ ಹಣ ಕೊಡುವಂತೆ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಿನ್ನೆ ಕಾರ್ಖಾನೆ ಮಾಲಿಕರ ಜತೆ ಸಭೆ ನಡೆಸಿತು.

ವಿಶೇಷವೆಂದರೆ ಕಾರ್ಖಾನೆ ಮಾಲಿಕರಲ್ಲಿ ಹೆಚ್ಚಿನವರು ಶಾಸಕರು, ಸಚಿವರೇ ಇದ್ದಾರೆ. ಇವರ ಪೈಕಿ ಬೆಳಗಾವಿಯ ಪ್ರಭಾವಿ ಶಾಸಕ ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ರೈತರಿಗೆ 4 ಲಕ್ಷಕ್ಕೂ ಅಧಿಕ ಹಣ ಬಾಕಿ ಪಾವತಿಸಬೇಕಿದೆ ಎನ್ನಲಾಗಿದೆ.

ಇಂದು ಬೆಳಗಾವಿಯ ಡಿಸಿ ಕಚೇರಿ ಮುಂದೆ ರೈತರು ಬಾಕಿ ಕೊಡಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಜಾರಕಿಹೊಳಿ ಸಹೋದರರ ಒಡೆತನದ ಕಾರ್ಖಾನೆ ತಮಗೆ ಬಾಕಿ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಡಿಸಿ ಕಚೇರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.

ಆದರೆ ನಿನ್ನೆ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದ ಜಾರಕಿಹೊಳಿ ಸಹೋದರರು ತಮ್ಮ ಕಾರ್ಖಾನೆಗಳಲ್ಲಿ ರೈತರಿಗೆ ನೀಡಬೇಕಾದ ಬಾಕಿಯನ್ನು ಮುಂಬರುವ ಬೆಳಗಾವಿ ಅಧಿವೇಶನಕ್ಕೆ ಮೊದಲು ನೀಡುವುದಾಗಿ ಭರವಸೆ ನೀಡಿದ್ದಾರೆ. ನುಡಿದಂತೆ ನಡೆಯದೇ ಇದ್ದರೆ ಜಾರಕಿಹೊಳಿ ಸಹೋದರರಿಗೆ ಮಾತ್ರವಲ್ಲ, ಕಾರ್ಖಾನೆ ಮಾಲಿಕರೂ ಆಗಿರುವ ಎಲ್ಲಾ ರಾಜಕಾರಣಿಗಳಿಗೆ ಮುಂದಿನ ಅಧಿವೇಶನದಲ್ಲಿ ಅದರ ಬಿಸಿ ಮುಟ್ಟಿಸಲು ರೈತರು ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ