ಪ್ರದೀಪ್ ಶೆಟ್ಟರ್ ಮಾನಸಿಕ ಸ್ಥಿತಿ ಸರಿಯಿಲ್ಲ: ರಾಜಣ್ಣ ಕೊರವಿ ಆರೋಪ

ಸೋಮವಾರ, 26 ಮಾರ್ಚ್ 2018 (18:44 IST)
ಪಕ್ಷದ ಫಂಡ್ ಗಾಗಿ ರಾಜಣ್ಣ ಕೊರವಿ  ಚುನಾವಣೆಯಲ್ಲಿ ಸ್ಪರ್ಧೆಗಾಗಿ ಮುಂದಾಗಿದ್ದಾರೆ ಎಂದು ಪ್ರದೀಪ್ ಶೆಟ್ಟರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೊರವಿ,  ಪ್ರದೀಪ ಶೆಟ್ಟರ್ ಮೇಲ್ಮನೆ ಸದಸ್ಯರು ಆ ಮನೆಗೆ ಮೇಧಾವಿಗಳು ಹೋಗಬೇಕು. ಆದರೆ ಪ್ರದೀಪ ಶೆಟ್ಟರ್ ಇದಕ್ಕೆ ಯೋಗ್ಯರಲ್ಲ. ಅವರು ಮೊದಲೇ ದೈಹಿಕವಾಗಿ ವಿಕಲಚೇತನ ಈಗ ಮಾನಸಿಕ‌ ವಿಕಲಚೇತನರಾಗಿದ್ದಾರೆ ಎಂದು ದೂರಿದ್ದಾರೆ.
 ಕೂಡಲೇ ಅವರ ಸಂಬಂಧಿಕರು ಧಾರವಾಡದ ಮಾನಸಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಬೇಕು. ಪ್ರದೀಪ್ ಶೆಟ್ಟರ್ ಯಾವ ಮಾನದಂಡದ ಮೇಲೆ ಆಯ್ಕೆಯಾದರು ಎಲ್ಲರಿಗೂ ಗೊತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ನಾಗಾರಾಜ ಛಬ್ಬಿ ಜೊತೆ ಒಳಹೊಂದಾಣಿಕೆ ಮೂಲಕ ಆಯ್ಕೆಯಾಗಿದ್ದಾರೆ. ಆ ಚುನಾವಣೆಯಲ್ಲಿ ಹಣ ಮತ್ತು ಒಳ ಒಪ್ಪಂದ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ