ಬಿಜೆಪಿ ಶಾಂತಿ ವಿರೋಧಿ, ಜೆಡಿಎಸ್ ಅವಕಾಶವಾದಿ ಪಕ್ಷ: ಸಿಎಂ ಲೇವಡಿ

ಸೋಮವಾರ, 26 ಮಾರ್ಚ್ 2018 (13:45 IST)
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳೋ ಅರ್ಹತೆ ಕಾಂಗ್ರೆಸ್ ಗೆ ಇದೆ.ಎಲ್ಲರನ್ನೂ ಸಮಾನವಾಗಿ ನೋಡೋ ಒಂದೇ ಒಂದು ಪಕ್ಷ ಅಂದ್ರೆ ಅದು ಕಾಂಗ್ರೆಸ್. ಅವಕಾಶವಾದಿ ಪಕ್ಷ ಜೆಡಿಎಸ್ ಬೇಕಾ, ಶಾಂತಿ ಓಡೆಯುವ ಬಿಜೆಪಿ ಪಕ್ಷ ಬೇಕಾ, ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷ ಬೇಕಾ ಎಂದು ಸಿಎಂ ಸಿದ್ದರಾಮಯ್ಯ ನೆರೆದಿದ್ದ ಮತದಾರರನ್ನು ಪ್ರಶ್ನಿಸಿದರು.
ಇವತ್ತು ಒಂದು ಐತಿಹಾಸಿಕ ದಿನ ಎಂದು ಭಾವಿಸಿದ್ದೇನೆ.ಇಂಹತ ಬೃಹತ್ ಸಮಾವೇಶ ಎಂದು ಆಗಿರಲಿಲ್ಲಾ.ಇದನ್ನು ಆಯೋಜಿಸಿದ್ದ ಎಲ್ಲರಿಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂಧಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ರಾಹುಲ್ ಗಾಂಧಿ ಅಧ್ಯಕ್ಷರಾದ ಮೇಲೆ ಜನಾರ್ಶಿರ್ವಾದದಲ್ಲಿ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದಾರೆ. ಈಗಾಗಲೇ ಮೂರು ಪ್ರವಾಸ ಕೈಗೊಂಡಿದ್ದಾರೆ. ಗುಲ್ಬರ್ಗಾ,ಕರಾವಳಿ,ಮೈಸೂರಿನಲ್ಲಿ ಬದಲಾವಣೆಯ ರಾಜಕೀಯ ಗಾಳಿ ಬೀಸುತ್ತಿದೆ ಎಂದು ಹೇಳಿದರೆ ತಪ್ಪಾಗದು ಎಂದರು.
 
ರಾಹುಲ್ ಗಾಂಧಿ ಸರಳ,ಸಜ್ಜನಿಕೆಯ ವ್ಯಕ್ತಿ.ಈ ಚುನಾವಣೆ ಮಹತ್ತರ ಚುನಾವಣೆ ಅಂದು ನಾನು ಭಾವಿಸಿದ್ದೇನೆ. ಬಿಜೆಪಿ ಕೋಮುವಾದಿ ಪಕ್ಷ. ನಾಲ್ಕು ವರ್ಷದಲ್ಲಿ ಮೋದಿ ನುಡಿದಂತೆ ನಡೆಯಲಿಲ್ಲಾ. ಬಸವಣ್ಣರವರ ಬಗ್ಗೆ ಮಾತನಾಡಲು ಮೋದಿಗೆ ನೈತಿಕತೆ ಇಲ್ಲ. ಕಪ್ಪು ಹಣ ಹೊರ ತಂದು ದೇಶದ ಜನರ ಬ್ಯಾಂಕ್ ಗೆ ಹಾಕ್ತೀನಿ ಅಂದ್ರೂ ಆದ್ರೆ ಇದುವರೆಗೂ ಹಾಕಿಲ್ಲಾ. ಜನರನ್ನು ಮರಳು ಮಾಡೋಕೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳಿ ಮೋಸ ಮಾಡ್ತೀದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ