ಪ್ರಜ್ವಲ್ ಪ್ರಕರಣದ ಚಿತ್ರಕಥೆ ಸುರ್ಜೇವಾಲ, ನಿರ್ದೇಶನ ಸಿದ್ದರಾಮಯ್ಯ, ಬಂಡವಾಳ ಹಾಕಿದ್ದು ಡಿಕೆಶಿ ಎಂದ ಆರ್ ಅಶೋಕ್

Sampriya

ಮಂಗಳವಾರ, 7 ಮೇ 2024 (16:05 IST)
Photo Courtesy X
ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣವು ರಾಜ್ಯ ಕಾಂಗ್ರೆಸ್‌ ವಕ್ತಾರ ರಣದೀಪ್ ಸುರ್ಜೇವಾಲಾ ಚಿತ್ರಕಥೆಯಾಗಿದ್ದು, ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದ್ದಾರೆ. ಈ ಸಿನಿಮಾಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಂಡವಾಳ ಹೂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಹೇಳಿದರು.  

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಾರೆ.  ತನಿಖೆ ಸಂಬಂಧ ಯಾರನ್ನು ಬಂಧಿಸಬೇಕು, ಬಿಡುಗಡೆ ಮಾಡುವ ಬಗ್ಗೆ ಸಿದ್ದರಾಮಯ್ಯ ಅವರು ಮೀಟಿಂಗ್ ಮಾಡಿ ಕ್ರಮ ಕೈಗೊಳ್ಳುತ್ತಿದಗ್ದಾರೆ. ಅದಲ್ಲದೆ ಸಿದ್ದರಾಮಯ್ಯ, ಶಿವಕುಮಾರ್, ಸುರ್ಜೇವಾಲ ಅವರ 'ತ್ರಿಬಲ್ ಎಸ್' ಎಸ್‌ಐಟಿ ತಂಡವು ಪ್ಲ್ಯಾನ್ ಮಾಡಿ ಪ್ರಕರಣವನ್ನು ಮುನ್ನಡೆಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕುತಂತ್ರ ಮಾಡಿ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಕಳುಹಿಸಿ ಇದೀಗ  ಮೋದಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಶಾಸಕ ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಯಾವ ರೀತಿ ಸಿಕ್ಕಿಸಿ ಹಾಕಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆಲ್ಲ ಸುದ್ದಿ ಹಬ್ಬಿಸಬೇಕೆಂದು  ಪ್ಲ್ಯಾನ್ ಮಾಡಿದ್ದಾರೆ. ಇನ್ನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅಣ್ಣನ ಮಗ ಎಂದು ಬಿಂಬಿಸಿ ಒಕ್ಕಲಿಗರನ್ನು ಟಾರ್ಗೆಟ್ ಮಾಡುವ ಕುತಂತ್ರ ಕಾಂಗ್ರೆಸ್‌ನದ್ದು ಎಂದರು.

ದೇವರಾಜೇಗೌಡ ಕಾನೂನು ತಜ್ಞ ಹಾಗೂ ವಕೀಲ. ದಾಖಲೆ ಸಮೇತ ಈ ಪ್ರಕರಣವನ್ನು ಮುಂದಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಮಾತನಾಡಿ ಆಫರ್ ನೀಡಿರುವುದು, ಶಿವರಾಜೇಗೌಡ ಮಾತನಾಡಿರುವುದನ್ನು ರೆಕಾರ್ಡ್ ಸಮೇತ ಮುಂದಿಟ್ಟದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ