ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬರ್ತ್ ಡೇ ಸೆಲೆಬ್ರೇಷನ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ನಡೆದಿದೆ. ಈ ವೇಳೆ ಅವರಿಗೆ ಸಾಥ್ ಕೊಟ್ಟವರು ಯಾರು ಗೊತ್ತಾ?
ಸಾಮಾನ್ಯವಾಗಿ ಪ್ರಜ್ವಲ್ ರೇವಣ್ಣ ತಮ್ಮ ಹಿಂಬಾಲಕರೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಲೈಂಗಿಕ ಕಿರುಕುಳ ಆರೋಪದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಗೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸುವ ಭಾಗ್ಯ ಇಲ್ಲ.
ಹೀಗಾಗಿ ಅವರು ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರಜ್ವಲ್ ಗೆ ನಿನ್ನೆ ಹುಟ್ಟುಹಬ್ಬವಿತ್ತು. ಈಗ ಅವರು 34 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ಹಿನ್ನಲೆಯಲ್ಲಿ ಅವರನ್ನು ನೋಡಲು ಸಹೋದರ ಸೂರಜ್ ರೇವಣ್ಣ ಜೈಲಿಗೆ ಬಂದಿದ್ದರು. ಹುಟ್ಟುಹಬ್ಬದಂದು ಸಹೋದರನಿಗೆ ಸಾಥ್ ಕೊಟ್ಟ ಸೂರಜ್ ವಿಶ್ ಮಾಡಿ ತೆರಳಿದ್ದಾರೆ.
ವಿಪರ್ಯಾಸವೆಂದರೆ ಸೂರಜ್ ಕೂಡಾ ಯುವಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊಂದಿದ್ದಾರೆ. ಅವರು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಇದೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದರು. ಇದೀಗ ತಮ್ಮನ ಹುಟ್ಟುಹಬ್ಬದಂದು ಜೊತೆಯಾಗಿದ್ದಾರೆ.