ತನ್ನ ಅಣ್ಣ ಸೂರಜ್ ರೇವಣ್ಣರ ತೋಟದ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯನ್ನು ರೇಪ್ ಮಾಡಿದ್ದ. ಆಕೆಗೆ ಕೊಠಡಿಗೆ ನೀರು ತರಲು ಹೇಳಿ ಬಲಾತ್ಕಾರ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ. ತನ್ನ ತಾತ ದೇವೇಗೌಡರ ಸರ್ಕಾರೀ ನಿವಾಸದಲ್ಲೂ ಗ್ರಾಮಪಂಚಾಯತಿ ಸದಸ್ಯೆ ಮೇಲೆ ಅತ್ಯಾಚಾರವೆಸಗಿದ್ದ. ಇಂತಹ ಒಬ್ಬ ಮನೆ ಮಗನಿಂದಾಗಿ ದೇವೇಗೌಡರು ರಾಜಕೀಯದಲ್ಲಿ ಗಳಸಿದ್ದ ಗೌರವವೆಲ್ಲಾ ಮಣ್ಣುಪಾಲಾಯಿತು ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.