ಪ್ರಜ್ವಲ್ ವಿರುದ್ಧ ಎಸ್ ಐಟಿ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಸಿದ್ದು, ಆತ ತೋಟದ ಮನೆಯಲ್ಲಿ ಮತ್ತು ಹಲವು ಬಾರಿ 60 ವರ್ಷದ ವೃದ್ಧೆ ಮೇಲೆ ರೇಪ್ ನಡೆಸಿರುವುದು ನಿಜ ಎಂದು ವರದಿ ಸಲ್ಲಿಸಿದೆ. ಒಟ್ಟು 1632 ಪುಟಗಳ ಚಾರ್ಜ್ ಶೀಟ್ ಇದಾಗಿದ್ದು 113 ಸಾಕ್ಷಿಗಳನ್ನು ಎಸ್ ಐಟಿ ತಂಡ ಉಲ್ಲೇಖಿಸಿದೆ.
ಬನ್ನಿಕೋಡ ತೋಟದ ಮನೆಯಲ್ಲಿ ಮೊದಲು ಮಹಿಳೆ ಮೇಲೆ ರೇಪ್ ನಡೆದಿತ್ತು. ಕುಡಿಯಲು ನೀರು ತಂದುಕೊಡಲು ಹೇಳಿದ ಪ್ರಜ್ವಲ್ ಬಾಗಿಲಿನ ಚಿಲಕ ಹಾಕಿದ್ದ. ಮಹಿಳೆ ಬಾಗಿಲು ತೆಗೆಯಣ್ಣ ಎಂದಾಗ ಬಿಡದೇ ಸೀರೆ ಮತ್ತು ಬ್ಲೌಸ್ ತೆಗಿಯೇ, ತೆಗಿಯೇ ಎಂದು ಗದರಿಸಿದ್ದಾನೆ.
ಬಳಿಕ ಮಹಿಳೆ ಗೋಗೆರೆದರೂ ಬಿಡದೇ ಆಕೆಯನ್ನು ಮಂಚದಲ್ಲಿ ಬೀಳಿಸಿ ರೇಪ್ ಮಾಡಿದ್ದಾನೆ. ಈ ವೇಳೆ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಸೆಲ್ಫೀ ವಿಡಿಯೋ ಮಾಡಿಕೊಂಡಿದ್ದಾನೆ. ಇನ್ನೊಮ್ಮೆ ಬಸವನಗುಡಿಯ ಮನೆ ಕ್ಲೀನ್ ಮಾಡಲು ಕರೆಸಿಕೊಂಡು ಇದೇ ಕೃತ್ಯವೆಸಗಿದ್ದಾನೆ. ಒಗೆಯುವ ಬಟ್ಟೆಗಳಿವೆ ರೂಂಗೆ ಬಂದು ತೆಗೆದುಕೊಂಡು ಹೋಗು ಎಂದಿದ್ದಾನೆ. ಒಳಗೆ ಬರಲು ಮಹಿಳೆ ಹಿಂಜರಿದಾಗ ಗದರಿ ಒಳಗೆ ಕರೆಸಿ ಚಿಲಕ ಹಾಕಿ ಮತ್ತೆ ರೇಪ್ ಮಾಡಿದ್ದಾನೆ.
ಈ ವಿಡಿಯೋಗಳನ್ನು ತೋರಿಸಿ ನಿನ್ನ ಮಗನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆಗ ಮಹಿಳೆ ನಿನ್ನ ತಂದೆ, ತಾತನಿಗೆ ಊಟ ಹಾಕಿದ್ದೇನೆ. ದಯವಿಟ್ಟು ನನ್ನ ಬಿಟ್ಬಿಡಪ್ಪಾ ಎಂದು ಗೋಗೆರಿದ್ದಾಳೆ. ಆದರೂ ಕೇಳದೇ ಪ್ರಜ್ವಲ್ ಮೃಗೀಯ ವರ್ತನೆ ತೋರಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.