ಕೇಜ್ರಿವಾಲ್ ಬಗ್ಗೆ ಪೋಸ್ಟ್ ಹಾಕಿದ್ರೆ ಮುಸ್ಲಿಮರಿಗೆ ಯಾಕೆ ಉರಿ: ಪ್ರತಾಪ್ ಸಿಂಹ

Krishnaveni K

ಮಂಗಳವಾರ, 11 ಫೆಬ್ರವರಿ 2025 (11:33 IST)
ಮೈಸೂರು: ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಮೈಸೂರಿನಲ್ಲಿ ಮುಸ್ಲಿಮ್ ಯುವಕರು ದಾಂಧಲೆ ನಡೆಸಿದ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕೇಜ್ರಿವಾಲ್ ಬಗ್ಗೆ ಪೋಸ್ಟ್ ಮಾಡಿದರೆ ನಿಮಗೆ ಯಾಕೆ ಉರಿಯುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬೆನ್ನಲ್ಲೇ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಕೇಜ್ರಿವಾಲ್, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ವಿರುದ್ಧ ಅವಹೇಳನಕಾರೀ ಪೋಸ್ಟ್ ಮಾಡಿದ್ದ. ಆದರೆ ಇದರ ಜೊತೆಗೆ ಧರ್ಮಗುರುಗಳ ಬಗ್ಗೆ ಅವಹೇಳನಕಾರೀ ಬರಹ ಬರೆದಿದ್ದು ಮುಸ್ಲಿಮರ ಆಕ್ರೋಶಕ್ಕೆ ಗುರಿಯಾಗಿತ್ತು.

ಈ ಸಂಬಂಧ ಏಕಾಏಕಿ ಉದಯಗಿರಿ ಪೊಲೀಸ್ ಠಾಣೆಗೆ ಕೆಲವು ಮುಸ್ಲಿಮ್ ಯುವಕರ ಗುಂಪು ನುಗ್ಗಿ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದೆ. ಘಟನೆ ಬಳಿಕ ಮೈಸೂರಿನಲ್ಲಿ ಉದ್ವಿಗ್ನ ಪರಿಸ್ಥಿತಿಯಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ‘ಅಲ್ಲಾ ಯಾರೋ ಕೇಜ್ರಿವಾಲ್ ಬಗ್ಗೆ ಪೋಸ್ಟ್ ಮಾಡಿದ್ರೆ ಮುಸ್ಲಿಮರಿಗೆ ಯಾಕೆ ಉರಿಯುತ್ತೆ? ಅಂದರೆ ನಿಮಗೆ ಕಾಂಗ್ರೆಸ್ ಗೆದ್ದರೆ ಮಾತ್ರ ಸಂತೋಷ ಆಗೋದಾ? ಕಾಂಗ್ರೆಸ್ ಸರ್ಕಾರದ  ಅವಧಿಯಲ್ಲಿ ಮುಸ್ಲಿಂ ಪುಂಡರಿಗೆ ಕಾನೂನು ಕೈಗೆತ್ತಿಕೊಳ್ಳಲು ಲೈಸೆನ್ಸ್ ಕೊಟ್ಟಂತಾಗಿದೆ. ಏನು ಮಾಡಿದ್ರೂ ಸಿದ್ದರಾಮಯ್ಯ ನಮ್ಮನ್ನು ಕಾಪಾಡುತ್ತಾರೆ ಎಂಬ ನಂಬಿಕೆಯಿದೆ. ಸಿದ್ದರಾಮಯ್ಯನವರೇ ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ. ದಾಂಧಲೆ ನಡೆಸಿದವರನ್ನು ಅವರು ಹೆಡೆಮುರಿ ಕಟ್ಟುತ್ತಾರೆ’ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ