ವಿ.ಸೋಮಣ್ಣ ಬೈಗುಳಕ್ಕೆ ಹೇರ್ ಸ್ಟೈಲ್ ಚೇಂಜ್ ಮಾಡಿದ ಪ್ರತಾಪ್ ಸಿಂಹ

Sampriya

ಶುಕ್ರವಾರ, 11 ಅಕ್ಟೋಬರ್ 2024 (17:28 IST)
Photo Courtesy X
ಮೈಸೂರು: ಸಂಸದ ಸ್ಥಾನದಿಂದ ಕೆಳಗಿಳಿದರು ಪ್ರತಾಪ್ ಸಿಂಹ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ರಾಜಕೀಯ ಆಗು ಹೋಗುಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಆಕ್ಟೀವ್ ಆಗಿದ್ದಾರೆ. ದೇಶದ ಬೆಳವಣಿಗೆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಸಂಸದ ಸ್ಥಾನದಿಂದ ಕೆಳಗಿಳಿದ ಬಳಿಕ ಪ್ರತಾಪ್ ಸಿಂಹ ಅವರು ಉದ್ದ ಕೂದಲು, ಗಡ್ಡದೊಂದಿಗೆ ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಪ್ರತಾಪ್ ಸಿಂಹ ಅವರು ಸ್ನೇಹಿತರ ಹಾಗೂ ರಾಜಕೀಯದ ಕಾರ್ಯಕ್ರಮಗಳಲ್ಲಿ  ಭಾಗವಹಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಅಕ್ಟೋಬರ್ 7ರಂದು ಪ್ರತಾಪ್ ಸಿಂಹ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೊಸ ಹೇರ್‌ ಸ್ಟೈಲ್ ಲುಕ್‌ನ ಫೋಟೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಪ್ರತಪ್ ಸಿಂಹ ಅವರು ಉದ್ದ ಕೂದಲಿನಲ್ಲಿ ಪೋಸ್ ನೀಡಿದ್ದರು. ಇದೀಗ ದಿಢೀರನೇ ಈ ಹೇರ್‌ ಸ್ಟೈಲ್‌ ಅನ್ನು ಚೇಂಜ್ ಮಾಡಿದ್ದಾರೆ. ಅದಕ್ಕೆ ಕಾರಣ ಯಾರೆಂಬುದನ್ನು ಕೂಡಾ ಅವರು ಹೇಳಿಕೊಂಡಿದ್ದಾರೆ.

ಕೇಂದ್ರ ಸಚಿವರು ಹಾಗೂ ಹಿರಿಯಣ್ಣನಂತೆ ನನ್ನನ್ನು ಸಲುಹುವ ವಿ. ಸೋಮಣ್ಣ  ಸಾಹೇಬರ  ಗದರಿಕೆಗೆ ಅಂಜಿ ಹೇರ್ ಕಟ್ ಮಾಡಿಸಿದ್ದೇನೆ ಮತ್ತು ನಿಮ್ಮ ಬೈಗುಳದಿಂದಲೂ ತಪ್ಪಿಸಿಕೊಳ್ಳುತಿದ್ದೇನೆ ಎಂದು ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ನ್ಯೂ ಹೇರ್‌ ಕಟ್‌ನಲ್ಲಿ ಪೋಟೋ ಹಂಚಿ ಬರೆದುಕೊಂಡಿದ್ದಾರೆ.

ಅದಕ್ಕೆ ವಿ ಸೋಮಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಲಹೆ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಪ್ರತಾಪ್ ಸಿಂಹಗೆ ಹಾರೈಸಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ