ಯತ್ನಾಳ್ ಟೀಂ ಜೊತೆ ಇದ್ದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಬಿವೈ ವಿಜಯೇಂದ್ರರನ್ನು ತಾವೇ ಸ್ವಾಗತಿಸಿದ್ರು

Krishnaveni K

ಸೋಮವಾರ, 24 ಫೆಬ್ರವರಿ 2025 (12:56 IST)
ಮೈಸೂರು: ರಾಜ್ಯ ಬಿಜೆಪಿ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನ ಜೊತೆ ಕಾಣಿಸಿಕೊಂಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಇಂದು ಮೈಸೂರಿಗೆ ಆಗಮಿಸಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ತಾವೇ ಸ್ವಾಗತಿಸಿ ಗಮನ ಸೆಳೆದರು.

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬದಲಾವಣೆಯಾಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಬಣ ಶ್ರಮಿಸುತ್ತಲೇ ಇದೆ. ಈ ಗುಂಪಿನಲ್ಲಿ ಪ್ರತಾಪ್ ಸಿಂಹ ಕೂಡಾ ಕಾಣಿಸಿಕೊಂಡಿದ್ದರು. ಆದರೆ ಇಂದು ಮೈಸೂರು ಗಲಭೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಮೈಸೂರು ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ವಿಜಯೇಂದ್ರರನ್ನು ತಾವೇ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ.

ಮೈಸೂರಿಗೆ ಬಂದ ವಿಜಯೇಂದ್ರ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಯೋಜನೆ ರೂಪಿಸಿದ್ದಾರೆ. ಈ ವೇಳೆ ಸಭೆಯಲ್ಲಿ ಪ್ರತಾಪ್ ಸಿಂಹ ಮತ್ತು ವಿಜಯೇಂದ್ರ ಅಕ್ಕಪಕ್ಕವೇ ಕೂತಿದ್ದರು.

ಇಬ್ಬರೂ ಪರಸ್ಪರ ನಗು ನಗುತ್ತಲೇ ಕಾಲ ಕಳೆದಿದ್ದಾರೆ. ಮೊನ್ನೆಯವರೆಗೂ ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪ್ ಸಿಂಹ ಇಂದು ಅವರ ಜೊತೆಗೇ ಸಭೆಯಲ್ಲಿ ಭಾಗಿಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ