ಉಚಿತ ಪ್ರಯಾಣ ಇಫೆಕ್ಟ್: ಪುರುಷರಿಗೆ ಆಸನ ಬಿಟ್ಟುಕೊಡಲು ಕೆಎಸ್ ಆರ್ ಟಿಸಿ ಆದೇಶ

Krishnaveni K

ಶುಕ್ರವಾರ, 21 ಫೆಬ್ರವರಿ 2025 (11:59 IST)
ಮೈಸೂರು: ಬಸ್ಸಿನಲ್ಲಿ ಪುರುಷರಿಗಾಗಿ ಮೀಸಲಾಗಿರುವ ಆಸನವನ್ನು ಪುರುಷರಿಗೇ ಬಿಟ್ಟುಕೊಡಿ ಎಂದು ಕೆಎಸ್ ಆರ್ ಟಿಸಿ ಸೂಚನೆ ನೀಡಿದೆ. ಎಲ್ಲವೂ ಮಹಿಳೆಯರಿಗೆ ಉಚಿತ ಪ್ರಯಾಣದ ಇಫೆಕ್ಟ್.

ಕರ್ನಾಟಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗ ಬಸ್ ನಲ್ಲಿ ಪುರುಷರಿಗೆ ಆಸನವೂ ಸಿಗದಂತಾಗಿದೆ.

ಇದುವರೆಗೆ ಪುರುಷರ ಸೀಟಿನಲ್ಲಿ ಪುರುಷರೇ ಕೂರಬೇಕೆಂದು ಕಡ್ಡಾಯವೇನೂ ಇರಲಿಲ್ಲ. ಆದರೆ ಇದೀಗ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಪುರುಷರ ಆಸನವನ್ನು ಪುರುಷರಿಗೇ ಕಡ್ಡಾಯ ಮಾಡುವುದು ಅನಿವಾರ್ಯವಾಗಿದೆ.

ಇದೀಗ ಮೈಸೂರು ಕೆಎಸ್ ಆರ್ ಟಿಸಿ ವಿಭಾಗ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪುರುಷರ ಆಸವನ್ನು ಪುರುಷರಿಗೇ ಬಿಟ್ಟುಕೊಡಬೇಕು ಎಂದು ಸೂಚನೆ ನೀಡಿದೆ. ಪ್ರಯಾಣಿಕರೊಬ್ಬರು ನೀಡಿದ ದೂರಿನ ಅನ್ವಯ ಕೆಎಸ್ ಆರ್ ಟಿಸಿ ಈ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ