ಭಾವನಾ ಬೆಳಗೆರೆಗೊಂದು ಪ್ರತಿಭಾ ನಂದಕುಮಾರ್ ಬಹಿರಂಗ ಪತ್ರ

ಸೋಮವಾರ, 11 ಡಿಸೆಂಬರ್ 2017 (19:54 IST)
"ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಅವರು ನಿರಾಪರಾಧಿಯಾಗಿದ್ದು, ಶೀಘ್ರದಲ್ಲೇ ಅವರಿಗೆ ಕ್ಲೀನ್ ಚಿಟ್ ದೊರೆಯುತ್ತದೆ. ನನ್ನ ತಂದೆ ಹೆಸರು ಸಿಕ್ಕಿಸಿದ್ದಾರೆ. / ಇಷ್ಟು ದೊಡ್ಡ ಕೋಟೆ ಕಟ್ಟಿಕೊಂಡಿರುವ ರವಿ ಬೆಳಗೆರೆ ಎರಡನೇ ಮದುವೆ ಸಲುವಾಗಿ ಕತ್ತು ಕೊಯ್ಯುತ್ತೀನಿ, ಶೂಟ್ ಮಾಡ್ತೀನಿ ಅನ್ನೋ ವ್ಯಕ್ತಿ ಅಲ್ಲ " - ಎಂದು ಹೇಳಿರುವ ಭಾವನಾ ಬೆಳಗೆರೆಗೊಂದು ಬಹಿರಂಗ ಪತ್ರ. 
ಥೇಟ್ ಇದೇ ರೀತಿ, ನಿನ್ನಂತಹ ಅಸಂಖ್ಯಾತ ಹೆಣ್ಣುಮಕ್ಕಳು ತಮ್ಮ ತಾಯಿ ಮತ್ತು ತಂದೆಯರ ಬಗ್ಗೆ ಇದಕ್ಕಿಂತ ದಯನೀಯವಾಗಿ ಬೇಡಿಕೊಂಡು ನಿನ್ನ ತಂದೆಯ ಕಾಲಿಗೆ ಬಿದ್ದಾಗ ನಿನ್ನ ತಂದೆ ಅವರೆಲ್ಲರ ತಲೆಯ ಮೇಲೆ ಕಾಲಿಟ್ಟು ಹೊಸಕಿ  ತನ್ನ ಕೋಟೆಯನ್ನು ಕಟ್ಟಿಕೊಂಡ ಪಾಪಿ. ಬದುಕು ಒಂದು ಸುತ್ತು ಹೊರಳಿ ಬರುತ್ತದೆ ಅನ್ನುತ್ತಾರೆ. ಪಾಪದ ಕೊಡ ತುಂಬದ ಹೊರತು ಬೇರೆ ಗತಿ ಇಲ್ಲ. ನಿನ್ನ ತಂದೆ ಇಷ್ಟು ಕಾಲ ತನ್ನನ್ನು ಯಾರೂ  ತಡೆಯುವವರಿಲ್ಲ ಎನ್ನುವ ಭ್ರಮೆಯಲ್ಲಿ ಮಾಡಿರುವ ಅಸಂಖ್ಯಾತ ಕೊಳಕು ಪಾಪ ಕರ್ಮಗಳಿಗೆ ಬೆಲೆ ತೆರಲೇ ಬೇಕು. 
 
ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ನಾಳೆ ತನಗೂ ಅಧೋ ಗತಿ ಬಂದಾಗ ತನ್ನ ಹೆಣ್ಣು ಮಕ್ಕಳು ಹೀಗೆ ದಾರಿಯಲ್ಲಿ ನಿಂತು ಬೇಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ಸ್ವಲ್ಪವಾದರೂ ಇರಬೇಕಿತ್ತು ನಿನ್ನ ತಂದೆಗೆ.  ಯಾವುದೇ ತಪ್ಪು ಮಾಡದಿರುವವರ ಮೇಲೂ ಅನ್ಯಾಯವಾಗಿ ಶಿಕ್ಷೆಯನ್ನು ಕೊಡುವ ದೊಡ್ಡ ನ್ಯಾಯಾಧೀಶನಂತೆ ನಿನ್ನ ತಂದೆ ಮಾಡಿರುವ ಪಾಪಗಳಿಗೆ ಮಕ್ಕಳು ತಪ್ಪು ಕಾಣಿಕೆ ಕೊಡುವ ಕಾಲ ಈಗ ಬಂದಿದೆ.  ಆ ಎಲ್ಲಾ ಹೆಣ್ಣುಮಕ್ಕಳ ಕಣ್ಣೀರು ಮತ್ತು ಹೊಟ್ಟೆಯ ಸಂಕಟ ನಿಮ್ಮನ್ನು ಸುಡದೇ ಬಿಡದು.  ಪಾಪಕ್ಕೆ ಶಿಕ್ಷೆ  ಅನುಭವಿಸಲೇ ಬೇಕು. ಎಲ್ಲಾ ಹೆಣ್ಣುಮಕ್ಕಳ ಶಾಪ ತಟ್ಟಿದೆ ಎಂದು ಪ್ರತಿಭಾ ನಂದಕುಮಾರ್ ಬರೆದ ಬಹಿರಂಗ ಪತ್ರ ಇದೀಗ ಕೋಲಾಹಲ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ