ಆರ್‌ಎಸ್‌ಎಸ್‌ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ ಹಿಂದಿದೆ ಮಹಾ ಉದ್ದೇಶ: ವಿಜಯೇಂದ್ರ

Sampriya

ಮಂಗಳವಾರ, 21 ಅಕ್ಟೋಬರ್ 2025 (17:19 IST)
ಬೆಂಗಳೂರು: ಚಿತ್ತಾಪುರದಲ್ಲಿ ನವೆಂಬರ್ 2ರಂದು ಆರ್‌ಎಸ್‌ಎಸ್‌ ಪಥ ಸಂಚಲನ ನಡೆದೇ ನಡೆಯುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರಿಯಾಂಕ್ ಖರ್ಗೆಗೆ RSS ಬಗ್ಗೆ ಟೀಕೆ ಮಾಡೋ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲ. ಇದರ ಹಿಂದೆ ಪ್ರಚಾರಕ್ಕೂ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕುವ ವಿಚಾರಕ್ಕೂ ತಿಳಿದಿಲ್ಲ ಎಂದರು. 

ಇನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದಂತೆ ಪ್ರಿಯಾಂಕ್ ಖರ್ಗೆ ಏಕಾಂಗಿಯಾಗಿದ್ದಾರೆ.  ಗಾಂಧಿ ಕುಟುಂಬದಿಂದಲೇ RSS ಮಣಿಸೋಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡೋ ಮೂಲಕ ವಾಸ್ತವಿಕ ಸತ್ಯ ಮರೆ ಮಾಚೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು. 

ಆಡಳಿತ ಪಕ್ಷದ ವೈಫಲ್ಯವನ್ನು ಮುಚ್ಚಿಹಾಕುವ ಸಲುವಾಗಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 

ಇನ್ನೂ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥ ಸಂಚಲನ ನಡೆದೆ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ. 

ಬಿಜೆಪಿ ಅವರು ಸೀಳು ನಾಯಿಗಳು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಅಪ್ರಬುದ್ಧ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ