ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಸಾವು

ಬುಧವಾರ, 23 ಜನವರಿ 2019 (19:25 IST)
ಹೆರಿಗೆಗೆ ಕರೆತಂದಿದ್ದ ಗರ್ಭಿಣಿಯೊಬ್ಬರು ಪೀಣ್ಯದ ಇಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಲಗ್ಗೆರೆಯ ತುಂಬು ಗರ್ಭಿಣಿ ಅರ್ಪಿತ ಸಾವಿನ ಜೊತೆಗೆ ಮಗು ಕೂಡ ಹೊಟ್ಟೆಯಲ್ಲಿಯೇ ಮೃತಪಟ್ಟಿದೆ.ಮನೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅರ್ಪಿತಾರನ್ನು ನಿನ್ನೆ ರಾತ್ರಿ ಇಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಲವೇ ನಿಮಿಷಗಳಲ್ಲಿ ಅರ್ಪಿತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಆಸ್ಪತ್ರೆಗೆ ಕರೆತಂದ ಕೂಡಲೇ ವೈದ್ಯರು ಅರ್ಪಿತಾಗೆ ಡ್ರಿಪ್ಸ್ ಹಾಕಿದ್ದಾರೆ. ಡ್ರಿಪ್ಸ್ ಹಾಕಿದ ಐದೇ ನಿಮಿಷದಲ್ಲಿ ಉಸಿರಾಟದ ತೊಂದರೆಯಿಂದ ಅರ್ಪಿತ ಮೃತಪಟ್ಟಿದ್ದಾರೆ.
ಅರ್ಪಿತಗೆ ಡ್ರಿಪ್ಸ್ ಹಾಕುವ ವೇಳೆ ಯಾವುದೇ ಹಿರಿಯ ವೈದ್ಯರು ಇರಲಿಲ್ಲ ಹಾಗೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತರಬೇತಿ ನಿರತ ವೈದ್ಯರ ಎಡವಟ್ಟಿನಿಂದ ಅರ್ಪಿತ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸ್ಥಳಕ್ಕೆ ಆರ್ಎಂಸಿ ಯಾರ್ಡ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಅರ್ಪಿತಾ ಕುಟುಂಬದವರು ನೀಡಿದ ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ