'ನೈತಿಕ ಶಿಕ್ಷಣ ಅಳವಡಿಕೆಗೆ ಸಿದ್ಧತೆ'

ಮಂಗಳವಾರ, 19 ಏಪ್ರಿಲ್ 2022 (20:47 IST)
ಟಿಪ್ಪು ಪಠ್ಯ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ಕೊಟ್ಟಿದ್ದಾರೆ. ಪಠ್ಯದಲ್ಲಿ ಟಿಪ್ಪು ಪಠ್ಯ ಹೆಚ್ಚು ಕಡಿತ ಮಾಡಿಲ್ಲ. ಟಿಪ್ಪುವಿನ ಬಗ್ಗೆ ವಿಶೇಷವಾಗಿ ಅಪ್ಪಚ್ಚು ರಂಜನ್ ಅವರ ಡಿಮ್ಯಾಂಡ್ ಟಿಪ್ಪು ಪಾಠವನ್ನ ಕೈ ಬಿಡಿ ಅಂತ. ಇಲ್ಲವಾದ್ರೆ ಟಿಪ್ಪುವಿನ ಎಲ್ಲಾ ಮುಖವನ್ನ ಪಠ್ಯದಲ್ಲಿ ತೋರಿಸಿ ಅಂತ ಬೇಡಿಕೆ ಇದೆ. ಟಿಪ್ಪು ಸುಲ್ತಾನ್ ಬಗ್ಗೆ ಯಾವುದು ಹೇಳಿದ್ರು ಅದನ್ನ ಕೈ ಬಿಟ್ಟಿದೆ. ಆದ್ರೆ ಮೈಸೂರು ಹುಲಿ ಬಿರುದು ಕೈ ಬಿಟ್ಟಿಲ್ಲ. ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ ಮಾಡಲು ಚರ್ಚೆ ಮಾಡಲಾಗ್ತಿದ್ದು, ಮಕ್ಕಳಿಗೆ ಮಹಾಭಾರತ, ರಾಮಾಯಣ, ಪಂಚತಂತ್ರ ಕಥೆ ಸೇರಿದಂತೆ ಎಲ್ಲಾ ವಿಚಾರಗಳನ್ನ ನೈತಿಕ ಶಿಕ್ಷಣದಲ್ಲಿ ಸೇರಿಸುತ್ತೇವೆ . ನೈತಿಕ ಶಿಕ್ಷಣವನ್ನ ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ