ಭ್ರೂಣ ಹತ್ಯೆ ಪ್ರಕರಣ ಚರ್ಚೆಗೆ ನಿಲುವಳಿ ಸೂಚನೆ ಮಂಡನೆ
ರಾಜ್ಯದಲ್ಲಿ ಹೆಚ್ಚಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ವಿಧಾನಸಭೆಯಲ್ಲಿಂದು ನಿಯಮ 60ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಲಾಗಿದೆ. ಬಿಜಪಿ, ಜೆಡಿಎಸ್‌ನಿಂದ ಜಂಟಿಯಾಗಿ ನೋಟಿಸ್ ನೀಡಿದ ಶಾಸಕರು, ಮಂಡ್ಯದಲ್ಲಿ ಸ್ಕ್ಯಾನಿಂಗ್ ಮಾಡಿ 800ಕ್ಕೂ ಹೆಚ್ಚು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಮಾಡಿರುವುದರ ಬಗ್ಗೆ ಚರ್ಚೆಗೆ ಅವಕಾಶ ಕೋರಿದ್ರು.
ವಿಧಾನಸಭಾ ಕಾರ್ಯದರ್ಶಿಗೆ ವಿಪಕ್ಷ ನಾಯಕ ಆರ್.ಅಶೋಕ್ ನೋಟಿಸ್ ನೀಡಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ಶಾಸಕರು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದ್ರು.