ಪ್ರಧಾನಿ ಮೋದಿ ಪ್ರಶಂಸೆ ಬಿಜೆಪಿ ಸಂಸ್ಕಾರ

ಶುಕ್ರವಾರ, 21 ಏಪ್ರಿಲ್ 2023 (16:21 IST)
ಪ್ರಧಾನಿ ನರೇಂದ್ರ ಮೋದಿಯವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವುದಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇವತ್ತು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ರು. ಮೋದಿಯವರ ಕರೆ ಅಂದಾಗ ನನಗೆ ಆಶ್ಚರ್ಯವಾಯ್ತು. ನನಗೆ ಟಿಕೆಟ್​ ಸಿಗದಿದ್ದಕ್ಕೆ ಪ್ರಧಾನಿ ಮೋದಿ ಧೈರ್ಯ ಹೇಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.. ಇದು ಭಾರತೀಯ ಜನತಾ ಪಾರ್ಟಿಯ ಸಂಸ್ಕಾರ. ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಮರೆಯಲ್ಲ ಎಂದಿದ್ದಾರೆ.. ಹಿರಿಯರ ಸೂಚನೆ ಪ್ರಕಾರ ನಿವೃತ್ತಿ ಪತ್ರ ಬರೆದಿದ್ದೆ. ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಪಕ್ಷ ಬಿಡುವಾಗ ಅವರಿಗೆ ಪತ್ರ ಬರೆದಿದ್ದೆ. ನನ್ನ ನಿರ್ಧಾರ ನನಗೆ ವಿಶೇಷ ಅನಿಸಿಲ್ಲ. ಟಿಕೆಟ್ ಸಿಗೋದಿಲ್ಲ ಅಂತ ಬೇಸರ ಮಾಡುವುದು ಸರಿಯಲ್ಲ ಎಂದಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ