ರಾಹುಲ್ನೇ ಬಿಡಲಿಲ್ಲ, ಇನ್ನು ನನ್ನ ಬಿಡ್ತಾರಾ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ರವರ ನಾಮಪತ್ರ ತಿರಸ್ಕೃತವಾಗುವ ಆತಂಕ ಎದುರಾಗಿತ್ತು.. ಹೀಗಾಗಿ ಡಿಕೆಶಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.. ಬಿಜೆಪಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಏನೆಲ್ಲಾ ಮಾಡಿದ್ರು.. 15 ದಿನದೊಳಗೆ ವಿಚಾರಣೆ ಮುಗಿಸಿದ್ರು.. ಎರಡು ದಿನದಲ್ಲೇ ಸಂಸತ್ ಸ್ಥಾನದಿಂದ ಅವರನ್ನು ತೆಗೆದ್ರು, ಮನೆಯನ್ನ ಖಾಲಿ ಮಾಡಬೇಕೆಂದ್ರು, ಬಿಜೆಪಿಯವರು ರಾಹುಲ್ ಗಾಂಧಿಯವರನ್ನೇ ಬಿಡಲಿಲ್ಲ, ಇನ್ನು ನನ್ನನ್ನು ಬಿಡ್ತಾರಾ ಎಂದು ಪ್ರಶ್ನಿಸಿದ್ರು.. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕೊಡಬಾರದ ಕಿರುಕುಳ ಕೊಡ್ತಿದ್ದಾರೆ.. ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಕಿರುಕುಳ ಕೊಡ್ತಿದ್ದಾರೆ ಎಂದರು.. ಇನ್ನೊಂದೆಡೆ ನನ್ನ ನಾಮಪತ್ರ ತಿರಸ್ಕಾರ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ, ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ.. ನನ್ನ ಕಲ್ಲು ಬಂಡೆ ಅಂತ ನೀವೇ ಕರೆದಿದ್ದೀರಿ.. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದಿದ್ದಾರೆ.