ಪ್ರಧಾನಿ ಮೋದಿಯವರ ದೂರದೃಷ್ಟಿಯೇ ಬಿಜೆಪಿ ಜಯಭೇರಿಗೆ ಕಾರಣ

ಸೋಮವಾರ, 4 ಡಿಸೆಂಬರ್ 2023 (13:01 IST)
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್‌ಗಢ್ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಪ್ರಧಾನಿ ಮೋದಿಯವರ ದೂರದೃಷ್ಟಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಪ್ರಧಾನಿ ಮೋದಿಯವರಿದೆ ದೇಶವನ್ನೇ ಅಲ್ಲ ವಿಶ್ವವನ್ನೇ ಆಳುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹ್ಯಾಟ್ರಿಕ್ ದಾಖಲೆ ನಿರ್ಮಿಸಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
 
ನಾಲ್ಕು ರಾಜ್ಯಗಳ ಚುನಾವಣೆ ಹಿನ್ನಲೆ ಧವಳಗಿರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ.ಈ ಎಲ್ಲಾ ಗೆಲುವಿಗೆ ಮೋದಿ , ನಡ್ಡಾ, ಅಮಿತ್ ಶಾ ಕಾರಣ.ಬೇರೆ ಯಾವುದೆ ಪಕ್ಷದಲ್ಲಿ ದೇಶವನ್ನು ಆಳುವ ಸಾಮರ್ಥ್ಯವಿಲ್ಲ.ಲೋಕಸಭಾ‌ ಚುನಾವಣೆಯಲ್ಲಿ ಎಲ್ಲಾ ಸೀಟ್ ಗೆಲ್ತೀವಿ.
 
ನಾನು ಪ್ರವಾಸ ಮಾಡ್ತೀನಿ.ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇನ್ನಷ್ಟು ಬಲ ಬಂದಿದೆ.ಕಾಂಗ್ರೆಸ್ ನ ಧೂಳಿಪಟ ಮಾಡಲಿಕ್ಕೆ ರೆಡಿಯಾಗಿದ್ದೀವಿ.ಲೋಕಾಸಭೆಗೆ ಇದೊಂದು ದೊಡ್ಡ ಉದಾಹರಣೆ.ಎಲ್ಲಾ ನಾಯಕರಿಗು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ