ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಸೋಲುತ್ತಿರುವ ಬೆನ್ನಲ್ಲೇ ಈಗ ‘ಪನೌತಿ’ ಯಾರು ಎಂದು ಪ್ರಶ್ನಿಸಿದ ಬಿಜೆಪಿ
ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಸೋತಿದ್ದಕ್ಕೆ ಮೈದಾನದಲ್ಲಿ ಪನೌತಿ ಇದ್ದಿದ್ದೇ ಕಾರಣ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ರಾಜಸ್ಥಾನ್ ಚುನಾವಣಾ ರಾಲಿಯಲ್ಲಿ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮೋದಿ ಅಪಶಕುನ ಎಂದು ವ್ಯಂಗ್ಯ ಮಾಡಿದ್ದರು.
ಇದೀಗ ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಸೋಲಿನೆಡೆಗೆ ಮುಖ ಮಾಡುತ್ತಿದ್ದಂತೇ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಈಗ ಪನೌತಿ ಯಾರು ಎಂದು ತಿರುಗೇಟು ಕೊಟ್ಟಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಮತ ಸೆಳೆಯಲು ಇಂತಹ ಗಿಮಿಕ್ ಗಳೆಲ್ಲಾ ನಡೆಯದು. ನಿಜವಾದ ಪನೌತಿ ಯಾರು ಎಂದು ಮತದಾರರೇ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಟಾಂಗ್ ಕೊಟ್ಟಿದ್ದಾರೆ.