ರಾಜಧಾನಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಬುಧವಾರ, 9 ನವೆಂಬರ್ 2022 (13:48 IST)
ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಮೋದಿ ಸ್ವಾಗತಿಸಲು ರಾಜಧಾನಿ ಭರದಿಂದ ಸಿದ್ಧವಾಗುತ್ತಿದೆ.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಮೋದಿ ಕಾರ್ಯಕ್ರಮದ ತಾತ್ಕಾಲಿಕ ಪಟ್ಟಿ ಪಾಲಿಕೆ ಕೈ ಸೇರುತ್ತಿದ್ದಂತೆ, ಇದಕ್ಕಾಗಿ ಭಾರೀ ಸಿದ್ಧತೆಗೆ ಮುಂದಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಯುದ್ಧೋಪಾದಿಯಲ್ಲಿ ಬಿಬಿಎಂಪಿ ಕಾಮಗಾರಿಗಳು ವೇಗ ಪಡೆದಿದೆ. ಖುದ್ದು ಸಿಎಂ ಬೊಮ್ಮಾಯಿ ಸಾಹೇಬ್ರೇ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ.

ಗುಂಡಿ ಮುಚ್ಚಲು ಏನ್ ದಾಡಿ ನಿಮಗೆ ಅಂತಾ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಣಾಮ ನಗರದಲ್ಲಿ ಕಳೆದ 5 ದಿನಗಳಿಂದ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಈ ಎಲ್ಲಾ ಕಾಮಗಾರಿಗಳ ವೇಗಕ್ಕೆ ಪ್ರಧಾನಮಂತ್ರಿ ಮೋದಿ ಬೆಂಗಳೂರಿಗೆ ಬರುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ