ಪ್ರಧಾನಿ ಮೋದಿ ಸುಳ್ಳು ಹೇಳಿಕೆ, ಪೊಳ್ಳು ಭರವಸೆ: ರಾಹುಲ್ ಗಾಂಧಿ

ಸೋಮವಾರ, 26 ಮಾರ್ಚ್ 2018 (13:19 IST)
ಭಾರತದಲ್ಲಿ ನಿರುದ್ಯೋಗ‌ ಸಮಸ್ಯೆ ದೊಡ್ಡ ಪಿಡುಗಾಗಿದೆ. ನಿರುದ್ಯೋಗ ಸಮಸ್ಯೆ ಈಡೇರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ. ಕೊಟ್ಟ ಭರವಸೆ ಯನ್ನು ಮೋದಿ‌ ಈಡೇರಿಸಿಲ್ಲ. ಯಾವ ಪ್ರದೇಶಕ್ಕೆ ಹೋದರೂ ಮೋದಿ ಬರೀ ಸುಳ್ಳು ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮೋದಿ ನುಡಿದಂತೆ ನಡೆಯುತ್ತಿಲ್ಲ. ಆದರೆ ಸಿದ್ದರಾಮಯ್ಯ ನುಡಿದಂತೆ ನಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡವರ ಪರ ನಿಂತಿದೆ. ಬಡವರು, ದಲಿತರು, ಅಲ್ಪಸಂಖ್ಯಾತರು ಕರ್ನಾಟಕದ ಪ್ರತಿಯೊಬ್ಬರೂ ನಮಗೆ ಒಂದೆ. ಕಳೆದ ಐದು ವರ್ಷದಲ್ಲಿ ಒಳ್ಳೆಯ ಸರ್ಕಾರವನ್ನ ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
 
ಭ್ರಷ್ಟಾಚಾರ ದ ಬಗ್ಗೆ ಮಾತನಾಡುವ ಮೋದಿ ಪಕ್ಕದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನು ನಿಲ್ಲಿಸಿಕೊಳ್ತಾರೆ. ಜೆಡಿಎಸ್ ಬಿಜೆಪಿಯ ಬಿ ಟೀಂ, ಜೆಡಿಎಸ್ ಗೆ ಮತ ಹಾಕಬೇಡಿ ಜೆಡಿಎಸ್ ಮೊದಲು ಜಾತ್ಯತೀತ ವಾಗಿತ್ತು ಇದೀಗ ಅದು ಜನತಾದಳ ಸಂಘಪರಿವಾರ ಆಗಿದೆ ಎಂದು ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ