ಪ್ರಧಾನಿ ನರೇಂದ್ರ ಮೋದಿ ಕಾರ್ಪೋರೇಟ್ ಮಗ ಎಂದವರಾರು?

ಶುಕ್ರವಾರ, 13 ಜುಲೈ 2018 (15:50 IST)
 
ಲೋಕಸಭಾ ಚುನಾವಣಾ ಸಮೀಪಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈಗ ರೈತರ ನೆನಪಾಗಿದೆ. ದೇಶದಲ್ಲಿ ಎಷ್ಟೆ ರ್ಯಾಲಿ ಮಾಡಿದರೂ, ರ್ಯಾಲಿ ಫಲ ನೀಡುವುದಿಲ್ಲ. ರೈತರ ಸಾಲ ಮನ್ನಾ ಮಾಡಿ ರೈತರ ಕಾಳಜಿ ವಹಿಸಬೇಕಿತ್ತು. ಆದ್ರೆ ಪ್ರಧಾನಿ ಕಾರ್ಪೊರೇಟ್ ವಲಯದ ಹಿತ ಕಾಪಾಡಿದ್ದು, ಅವರು ರೈತನ ಮಗನಲ್ಲ ಹೊರತು ಕಾರ್ಪೊರೇಟ್ ಮಗ ಆಗಿದ್ದಾರೆ. ಹೀಗಂತ ಹಿರಿಯ ಕಾಂಗ್ರೆಸ್ ಸಂಸದ ಟಾಂಗ್ ನೀಡಿದ್ದಾರೆ. 
 
ಇಂದಿನಿಂದ ಯಾದಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಯಿತು. ಸಮ್ಮಿಶ್ರ ಸರ್ಕಾರ ರಚನೆ ನಂತರ  ಯಾದಗಿರಿಯಲ್ಲಿ ಪ್ರಥಮ ಇಂದಿರಾ ಕ್ಯಾಂಟೀನ್ ಇದಾಗಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡಿತು. ಸಂದರ್ಭದಲ್ಲಿ ಮಾತನಾಡಿದ ಡಾ. ಖರ್ಗೆ, ಲೋಕಸಭಾ ಚುನಾವಣಾ ಸಮೀಪಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈಗ ರೈತರ ನೆನಪಾಗಿದೆ ಎಂದರು.

ದೇಶದಲ್ಲಿ ಎಷ್ಟೆ ರ್ಯಾಲಿ ಮಾಡಿದರೂ, ರ್ಯಾಲಿ ಫಲ ನೀಡುವುದಿಲ್ಲ. ರೈತರ ಸಾಲ ಮನ್ನಾ ಮಾಡಿ ರೈತರ ಕಾಳಜಿ ವಹಿಸಬೇಕಿತ್ತು. ಆದ್ರೆ ಪ್ರಧಾನಿ ಕಾರ್ಪೊರೇಟ್ ವಲಯದ ಹಿತ ಕಾಪಾಡಿದ್ದು ಅವರು ರೈತನ ಮಗನಲ್ಲ. ಪ್ರಧಾನಿ ಕಾರ್ಪೊರೇಟ್ ಮಗ ಆಗಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಇದು ಚುನಾವಣಾ ಗಿಮೀಕ್ ಆಗಿದೆ ಅಷ್ಟೇ. ರಾಜ್ಯದಲ್ಲಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈಕಮಾಂಡಗೆ ಬಿಟ್ಟದ್ದು ಎಂದು ಲೋಕಸಭಾ ಕಾಂಗ್ರೆಸ್ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ