ಸೌಭಾಗ್ಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸೋಮವಾರ, 25 ಸೆಪ್ಟಂಬರ್ 2017 (19:19 IST)
ಬಡವರ ಮನೆಗಳಿಗೆ ಉಚಿತ ವಿದ್ಯುತ್ ವಿತರಿಸುವ ಸೌಭಾಗ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ನವದೆಹಲಿಯ ಇಂಧನ ಇಲಾಖೆಯ ಕಾರ್ಯಕ್ರಮದಲ್ಲಿ ದೀನ ದಯಾಳ್ ಭವನ ಉದ್ಘಾಟಿಸಿದ ಅವರು, ಸೌಭಾಗ್ಯ ಯೋಜನೆಯಡಿ ಪ್ರತಿ ಮನೆಗೆ 5 ಎಲ್‌ಇಡಿ ಬಲ್ಡ್, ಬ್ಯಾಟರಿ ಮತ್ತು ಫ್ಯಾನ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 
 
ದೇಶದ ಪ್ರತಿ ಮನೆಗೂ ವಿದ್ಯುತ್ ಪೂರೈಕೆಯ ಗುರಿ ಹೊಂದಲಾಗಿದ್ದು, ಇದರಿಂದ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ 3 ಕೋಟಿ ಬಡವರಿಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ. 
 
16320 ಕೋಟಿ ರೂ. ವೆಚ್ಚದ ಸೌಭಾಗ್ಯ ಯೋಜನೆಗೆ ಕೇಂದ್ರ ಸರಕಾರ ಶೇ.60 ರಷ್ಟು ಹಣವನ್ನು ವಿನಿಯೋಗಿಸಲಿದ್ದು, ರಾಜ್ಯ ಸರಕಾರಗಳು ಶೇ.30 ರಷ್ಟು ಹಣವನ್ನು ವೆಚ್ಚ ಮಾಡಲಿವೆ. ಶೇ.10 ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ ಎಂದರು.
 
ಮುಂಬರುವ 2019ರ ಮಾರ್ಚ್ 31 ರೊಳಗೆ ದೇಶದ ಪ್ರತಿಯೊಂದು ಬಡವರ ಮನೆಗೆ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ