2022 ರ ವೇಳೆಗೆ ರೈತರ ಆದಾಯ ದ್ವಿಗುಣ: ಪ್ರಧಾನಿ ಮೋದಿ

ಸೋಮವಾರ, 25 ಸೆಪ್ಟಂಬರ್ 2017 (18:30 IST)
ಮುಂಬರುವ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ದೇಶದ ಜನತೆಗೆ ನಮ್ಮ ಮೇಲೆ ತುಂಬಾ ನಿರೀಕ್ಷೆಗಳಿವೆ. ಚುನಾವಣೆಗಾಗಿ ಕಾಯಬೇಡಿ, ಜನರ ಸೇವೆ ಮಾಡಿ, ನಮ್ಮ ಪಾಲಿಗೆ ಅಧಿಕಾರ ಜನರ ಸೇವೆಗಿರುವ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.
 
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ರಾಜಿಯಾಗಲ್ಲ. ದೇಶವನ್ನು ಅಭಿವೃದ್ಧಿಪಥದತ್ತ ತೆಗೆದುಕೊಂಡು ಹೋಗಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಕೈಲಾದ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಕರೆ ನೀಡಿದರು
 
ಡೋಕ್ಲಾಮ್ ವಿವಾದ ಶಾಂತಿಯುತವಾಗಿ ಬಗೆಹರಿಸಿದ್ದೇವೆ. ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳು ಉತ್ತಮವಾಗಿವೆ. ಎಲ್ಲಾ ರಾಷ್ಟ್ರಗಳು ಭಾರತದೊಂದಿಗಿನ ಸ್ನೇಹವನ್ನು ಬಯಸುತ್ತಿರುವುದು ಸಂತಸದ ಸಂಗತಿ ಎಂದರು.
 
ಶೌಚಾಲಯಕ್ಕೆ ಇಜ್ಜತ್ ಘರ್ ಹೆಸರು ಸರಿಯಾಗಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ಶೌಚಾಲಯಗಳಿಗೆ ಇಜ್ಜತ್ ಘರ್ ಎನ್ನುವ ಹೆಸರಿನಿಂದಲೇ ಕರೆಯಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ