ಖಾಸಗಿ ಶಾಲೆಗಳು ಹೀಗೆ ಧಮ್ಕಿ ಹಾಕಿದರೆ ಶಿಕ್ಷಣ ಇಲಾಖೆಗೆ ದೂರು ನೀಡಿ

ಮಂಗಳವಾರ, 24 ನವೆಂಬರ್ 2020 (10:06 IST)
ಬೆಂಗಳೂರು: ಸದ್ಯಕ್ಕೆ ಶಾಲೆ ಆರಂಭಿಸದೇ ಇರಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಆನ್ ಲೈನ್ ತರಗತಿ ನೆಪದಲ್ಲಿ ಪೋಷಕರಿಂದ ಪೀಸ್ ಪೀಕುವ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ.


ಶಾಲೆಗಳು ಆನ್ ಲೈನ್ ತರಗತಿ ನೆಪದಲ್ಲಿ ಹೆಚ್ಚುವರಿ ಶುಲ್ಕ ಕೇಳುವುದು, ಶುಲ್ಕ ಪಾವತಿಸದೇ ಇದ್ದರೆ ಮುಂದಿನ ತರಗತಿ ತೇರ್ಗಡೆ ಮಾಡಲ್ಲ ಎಂದು ಬೆದರಿಕೆ ಹಾಕುವುದು ಇತ್ಯಾದಿ ಮಾಡುವಂತಿಲ್ಲ. ಶೇ. 50 ಕ್ಕಿಂತ ಹೆಚ್ಚು ಶುಲ್ಕ ವಸೂಲಾತಿ ಮಾಡುವಂತಿಲ್ಲ. ಈ ರೀತಿ ಮಾಡಿದರೆ ನಮಗೆ ದೂರು ನೀಡಬಹುದು. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ