ಪಹಲ್ಗಾಮ್ ದಾಳಿಗೆ ಮುಸ್ಲಿಮ್ ಹಣೆಪಟ್ಟಿ ಕಟ್ಟುವ ಯತ್ನ ಎಂದ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರಿಂದ ಫೋಟೋ ಸಹಿತ ತಿರುಗೇಟು

Krishnaveni K

ಶುಕ್ರವಾರ, 25 ಏಪ್ರಿಲ್ 2025 (10:54 IST)
ಬೆಂಗಳೂರು: ಪಹಲ್ಗಾಮ್ ದಾಳಿಯಲ್ಲಿ ಮುಸ್ಲಿಮರನ್ನು ಬಿಟ್ಟು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಗುಂಡು ಹೊಡೆದಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರು ಫೋಟೋ ಸಮೇತ ತಿರುಗೇಟು ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ ನಮಗೆ ಮುಸ್ಲಿಮರೇ ಸಹಾಯ ಮಾಡಿದ್ದು. ಮುಸ್ಲಿಮರು-ಹಿಂದೂಗಳು ಎಂದೆಲ್ಲಾ ಪ್ರತ್ಯೇಕ ಮಾಡಬೇಡಿ ಎಂದೆಲ್ಲಾ ಹೇಳಿಕೆ ನೀಡುವ ಮಹಿಳೆಯರೊಬ್ಬರ ವಿಡಿಯೋವೊಂದನ್ನು ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿಕೊಂಡಿದ್ದಾರೆ.

ಬಳಿಕ ಕೆಲವು ಗೋಧಿ ಮೀಡಿಯಾಗಳು, ಬಿಜೆಪಿ ಬೆಂಬಲಿಗರು ಉಗ್ರರ ದಾಳಿಗೆ ಹಿಂದೂ-ಮುಸ್ಲಿಂ ಎಂದು ಹಣೆಪಟ್ಟಿ ಕಟ್ಟಲು ಹೊರಟಿದ್ದಾರೆ. ಪಹಲ್ಗಾಮ್ ನಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾರೆ ಎಂಬುದೆಲ್ಲಾ ಸುಳ್ಳು ಎಂಬುದು ಈ ಮಹಿಳೆಯ ಮಾತುಗಳಿಂದಲೇ ಗೊತ್ತಾಗುತ್ತದೆ. ಇದೆಲ್ಲಾ ಬಿಜೆಪಿ ಕಪೋಲಕಲ್ಪಿತ ಮಾತುಗಳು ಎಂದಿದ್ದರು. ಪ್ರಿಯಾಂಕ್ ಖರ್ಗೆ ಪೋಸ್ಟ್ ಈಗ ಅವರಿಗೇ ಮುಳುವಾಗಿದೆ.

ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿರುವ ಮಹಿಳೆ ಈ ಹಿಂದೆ ರಾಹುಲ್ ಗಾಂಧಿ ಜೊತೆಗಿರುವ ಫೋಟೋಗಳನ್ನು ನೆಟ್ಟಿಗರು ಶೇರ್ ಮಾಡಿದ್ದು, ನಿಮ್ಮದೇ ಕಾಂಗ್ರೆಸ್ ಕಾರ್ಯಕರ್ತೆಯಿಂದಲೇ ವಿಡಿಯೋ ಮಾಡಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಸಂತ್ರಸ್ತರ ವಿಡಿಯೋ ಹಂಚಿಕೊಂಡು ಮೊದಲು ಒಬ್ಬ ಭಾರತೀಯನಾಗಿ ಎಂದು ಸಲಹೆ ನೀಡಿದ್ದಾರೆ.


ಪೆಹಲ್ಗಾಮ್ ಭಯೋತ್ಪಾದಕ ದಾಳಿಯಿಂದ 27 ಜನರ ಅತ್ಯಮೂಲ್ಯ ಜೀವಹಾನಿಯಾಗಿದೆ, ಪ್ರವಾಸೋದ್ಯಮವನ್ನೇ ಜೀವನಾಧಾರವಾಗಿಸಿಕೊಂಡಿದ್ದ ಪೆಹಲ್ಗಾಮ್ ಜನತೆಯ ಜೀವನಕ್ಕೂ ಹಾನಿಯಾಗಿದೆ.
ಆದರೆ,
ದಾಳಿಯ ಮರುಕ್ಷಣವೇ #GodhiMedia ಗಳ ಸ್ಟುಡಿಯೋಗಳಲ್ಲಿ ಹಿಂದೂ ಮುಸ್ಲಿಂ ಬೆಂಕಿ ಹಚ್ಚುವ ಬೆಂಕಿಪಟ್ಟಣಗಳು ತಯಾರಾಗಿಬಿಟ್ಟವು.
ಇಂಟೆಲಿಜೆನ್ಸ್ ವೈಫಲ್ಯವಾಗಿದ್ದೇಕೆ?… pic.twitter.com/ReMgI9SgAi

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 24, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ