Viral Video: ಪಹಲ್ಗಾಮ್ ಸಂತ್ರಸ್ತರಿಗೆ ಮೌನ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಪಾಂಡ್ಯದ್ದು ಇದೇನು ವರ್ತನೆ

Krishnaveni K

ಗುರುವಾರ, 24 ಏಪ್ರಿಲ್ 2025 (11:42 IST)
Photo Credit: X
ಹೈದರಾಬಾದ್: ಐಪಿಎಲ್ 2025 ರಲ್ಲಿ ನಿನ್ನೆಯ ಪಂದ್ಯಕ್ಕೆ ಮೊದಲು ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಮಡಿದವರ ಗೌರವಾರ್ಥ ಕೆಲವು ನಿಮಿಷ ಮೌನಾಚರಣೆ ಮಾಡಲಾಯಿತು. ಆದರೆ ಈ ವೇಳೆ ಹಾರ್ದಿಕ್ ಪಾಂಡ್ಯ ವರ್ತನೆ ಈಗ ಕೆಂಗಣ್ಣಿಗೆ ಗುರಿಯಾಗಿದೆ.

ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಬಾದ್ ಪಂದ್ಯಕ್ಕೆ ಮೊದಲು ಮೃತರ ಗೌರವಾರ್ಥ ಎಲ್ಲಾ ಆಟಗಾರರೂ ಮೈದಾನದಲ್ಲಿ ಸಾಲಾಗಿ ಮೌನವಾಗಿ ನಿಂತು ಗೌರವ ಸಲ್ಲಿಸಿದರು. ಇವರಿಗೆ ಮೈದಾನದಲ್ಲಿದ್ದ ಪ್ರೇಕ್ಷಕರೂ ಸಾಥ್ ನೀಡಿದ್ದರು.

ಈ ವೇಳೆ ಎಲ್ಲಾ ಆಟಗಾರರೂ ಮೌನವಾಗಿದ್ದರೆ ಹಾರ್ದಿಕ್ ಪಾಂಡ್ಯ ಪಕ್ಕದಲ್ಲಿದ್ದ ಆಟಗಾರನ ಜೊತೆ ನಗು ನಗುತ್ತಾ ಏನೋ ಮಾತನಾಡುತ್ತಿದ್ದರು. ಪಾಂಡ್ಯ ಈ ವರ್ತನೆಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತರ ಗೌರವಾರ್ಥ ಮೌನ ಪ್ರಾರ್ಥನೆ ನಡೆಸಬೇಕಾದ ಸಂದರ್ಭದಲ್ಲಿ ಹಾರ್ದಿಕ್ ಈ ವರ್ತನೆ ಸರಿಯಿಲ್ಲ ಎಂದು ಹಲವರು ಆಕ್ಷೇಪಿಸಿದ್ದಾರೆ. ಆರಂಭದಲ್ಲಿ ಮಾತನಾಡುತ್ತಿದ್ದ ಹಾರ್ದಿಕ್ ಬಳಿಕ ಸುಮ್ಮನೇ ನಿಂತಿದ್ದರು.

Hardik Pandya was laughing during that moment of silence.????
pic.twitter.com/BCLMNxS0v7

— Gems of Cricket (@GemsOfCrickets) April 23, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ