ಬಿಎಂಸಿಆರ್‌ಐನಲ್ಲಿ ಉಪನ್ಯಾಸಕಿಯಾಗಿದ್ದ ಡಾ.ಮಮತಾ ಎಂಬುವವರು ನವೆಂಬರ್ 17 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ವಿದ್ಯಾರ್ಥಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆತ್ಮಹತ್ಯೆಗೆ ಯತ್ನಿಸಿರುವ ಉಪನ್ಯಾಸಕಿ ಡಾ.ಮಮತಾ ಅವರು ಬಿಎಂಸಿಆರ್‌ಐ ನಿರ್ದೇಶಕ ಡಾ. ಪಿ.ಕೆ.ದೇವದಾಸ್ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಹಿರಿಯ ಪ್ರಾಧ್ಯಾಪಕಿ ಡಾ.ಹೇಮಾವತಿ ಅವರು ಬಹಿರಂಗವಾಗಿ ತಮ್ಮನ್ನು ನಿಂದಿಸಿರುವುದಾಗಿ ದೂರಿದ್ದಾರೆ. ಈ ಕುರಿತು ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಪಿ.ಕೆ.ದೇವದಾಸ್ ಅವರು, ಹೇಮಾವತಿ ಹಾಗೂ ಮಮತಾ ಇಬ್ಬರು ಉಪನ್ಯಾಸಕರಾದ್ದು, ಹಲವು ದಿನಗಳಿಂದ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಆದರೆ, ಮಮತಾ ಅವರು ಆತ್ಮಹತ್ಯೆಗೆ ಯತ್ನಿಸುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಆಪ್ತ ಸಮಾಲೋಚನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.