ಟ್ಯಾಕ್ಸ್ ಹಾಕಿದ್ದು ನಾವಲ್ಲ ಅಂತಿದ್ದ ಕಾಂಗ್ರೆಸ್ ಸರ್ಕಾರ ತಾನೇ ಒಪ್ಪಿಕೊಂಡಿದೆ: ಬಿಜೆಪಿ ವ್ಯಂಗ್ಯ

Krishnaveni K

ಗುರುವಾರ, 24 ಜುಲೈ 2025 (10:34 IST)
Photo Credit: BJP X
ಬೆಂಗಳೂರು: ಮೂರು ವರ್ಷಗಳ ಜಿಎಸ್ ಟಿ ಪಾವತಿ ಮನ್ನಾ ಮಾಡಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೇ ಇತ್ತ ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ. ಇಷ್ಟು ದಿನ ನಾವಲ್ಲ ಅಂತಿದ್ದವರ ನಾಟಕ ಬಯಲಾಗಿದೆ ಎಂದಿದೆ.

ಮೂರು ವರ್ಷಗಳ ಜಿಎಸ್ ಟಿ ಒಮ್ಮೆಲೆ ಪಾವತಿಸಲು ನೋಟಿಸ್ ನೀಡಿದ ಬೆನ್ನಲ್ಲೇ ಸಣ್ಣ ವರ್ತಕರು ಸರ್ಕಾರದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿಎಂ, ಡಿಸಿಎಂ ಜಿಎಸ್ ಟಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರೋದು ಎಂದು ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಜಿಎಸ್ ಟಿ ನೋಟಿಸ್ ನೀಡಿದ್ದು ರಾಜ್ಯ ಸರ್ಕಾರ, ಕೇಂದ್ರದ ನಿರ್ಧಾರವಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಈಗ ಸಿಎಂ ಜಿಎಸ್ ಟಿ ಮನ್ನಾ ಮಾಡಿರುವುದು ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿದೆ.

‘ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್‌ ಬಿರಂಗಿ ಬೊಗಳೆ ಬಿಟ್ಟಿದ್ದ #TaxCM ಸಿದ್ದರಾಮಯ್ಯ ಅವರು, ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ.

ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ ತೆರಿಗೆ ವಿಧಿಸಿದ್ದು ಲೂಟಿ ಕಾಂಗ್ರೆಸ್ ಸರ್ಕಾರ ಎಂಬುದು ಸಾಬೀತಾಗಿದೆ!! ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ಕೇಂದ್ರ ಸರ್ಕಾರ ಎಂದು ಮೊಂಡುವಾದ ಮಾಡಿದ್ದ ಎಲ್ಲಾ ವಿತಂಡವಾದಿಗಳಿಗೂ ಓಂ ಶಾಂತಿ’ ಎಂದು ವ್ಯಂಗ್ಯ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ