ಮದುವೆ ಭರವಸೆ ಕೊಟ್ಟು ಹಣ ಕೊಳ್ಳೆ ಹೊಡೆದು ಪರಾರಿ

ಬುಧವಾರ, 1 ನವೆಂಬರ್ 2023 (20:00 IST)
ಬೆಂಗಳೂರು : ಮಹಿಳೆಗೆ  ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನು. ಮಹಿಳೆ ಆತ ಯಾರೆಂದು ನೋಡದೆ ಆತನ ಫ್ರೆಂಡ್ ರಿಕ್ವೆಸ್ಟ್ ನ್ನು ಅಕ್ಸೆಪ್ಟ್ ಮಾಡಿಕೊಂಡು ಆತನ ಜೊತೆ ಮೆಸೆಂಜರ್ ನಲ್ಲಿ ಚಾಟ್ ಮಾಡಲು ಶುರುಮಾಡಿದ್ದಾಳೆ.  ಮಹಿಳೆಯೊಬ್ಬಳು ಫೇಸ್ ಬುಕ್ ಫ್ರೆಂಡ್ ವೊಬ್ಬನನ್ನು ನಂಬಿ ಆತನಿಂದ ವಂಚನೆಗೆ ಒಳಗಾಗಿರುವ ಘಟನೆ  ನಡೆದಿದೆ.
 
ನಂತರ ಆತನ ಮಾತುಗಳಿಗೆ ಮರುಳಾದ ಮಹಿಳೆಗೆ ಆತ ಮದುವೆಯಾಗುವುದಾಗಿ ಭರವಸೆ ಕೊಟ್ಟು, ಆಕೆಯನ್ನು ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಅಲ್ಲದೇ ಮದುವೆಯಾಗ್ತಿದ್ದೇವೆ ಮನೆಬೇಕು ಹಣ ಬೇಕು ಎಂದು ಹೇಳಿ ಆಕೆಯಿಂದ ಹಣವನ್ನು ಕೂಡ ತೆಗೆದುಕೊಂಡಿದ್ದಾನೆ. ಅಲ್ಲದೇ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಹೇಳಿ ಆಕೆಯ ಸಂಬಂಧಿಕರಿಂದಲೂ ಹಣವನ್ನು ಕೊಳ್ಳೆ ಹೊಡೆದು ಪರಾರಿಯಾಗಿದ್ದಾನೆ.
 
 
ಮಹಿಳೆಗೆ ಮೋಸ ಹೋಗಿರೋದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದ್ದಾಗ ಆತನ ನಿಜ ಹೆಸರು ಸತೀಶ್ ಎಂಬುದಾಗಿಯೂ, ಹಾಗೇ ಹಲವಾರು ಫೇಸ್‍ಬುಕ್ ಅಕೌಂಟ್‍ಗಳಿಂದ ಸತೀಶ್ 30ಕ್ಕೂ ಹೆಚ್ಚು ಮಹಿಳೆಗೆ ಇದೇ ರೀತಿಯಾಗಿ ವಂಚನೆ ಮಾಡಿದ್ದಾನೆ ಎಂಬುದಾಗಿಯೂ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ