ಭೂ ವಿಸ್ತರಣೆ ಯೋಜನೆ ವಿರುದ್ಧ ಪ್ರತಿಭಟನೆ
ಎಂಆರ್ ಪಿಎಲ್ ಕಂಪನಿಯ ಭೂ ವಿಸ್ತರಣಾ ಯೋಜನೆಯನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿ ಕರಾವಳಿ ಕರ್ನಾಟಕ ಜನ ವಿರೋಧಿ ವೇದಿಕೆ ಪ್ರತಿಭಟನೆ ನಡೆಸಿತು.
ರೈತ ಸಂಘಗಳ ಒಕ್ಕೂಟ ಮತ್ತು ಎಂಆರ್ ಪಿಎಲ್ ಆಸುಪಾಸಿನ ನಿವಾಸಿಗಳಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.
ಎಂಆರ್ ಪಿಎಲ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ವಿಸ್ತರಣಾ ಯೋಜನೆಗೆ ನೀಡಿದ ಒಪ್ಪಿಗೆಯನ್ನ ಹಿಂಪಡೆಯಬೇಕು. ಈ ಬೃಹತ್ ರಾಸಾಯನಿಕ ಸ್ಥಾವರದಿಂದ ಆಗಬಹುದಾದ ಅನಾಹುತಗಳಿಂದ ಲಕ್ಷಾಂತರ ನಾಗರಿಕರ ಜೀವನಕ್ಕೆ ಧಕ್ಕೆಯಾಗಲಿದೆ.
ಅಲ್ಲದೇ ಕರಾವಳಿಯ ಸೂಕ್ಷ್ಮ ಪರಿಸರಕ್ಕೆ ಹಾಗೂ ಕೃಷಿ ಮತ್ತು ಮತ್ಸೋದ್ಯಮಕ್ಕೆ ಹಾನಿಯುಂಟು ಮಾಡಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.