ಉತ್ತರಾಧಿಕಾರಿ ವಿವಾದ: ಜೈನ ಮುನಿಗಳು ಆಕ್ರೋಶ
ಮಹಾರಾಷ್ಟ್ರ ನಾಂದೆಣಿ ಜೈನ ಮಠದ ಉತ್ತರಾಧಿಕಾರಿಯ ನೇಮಕದ ವಿಚಾರವಾಗಿ ವಿವಾದ ಭುಗಿಲೆದ್ದಿದೆ.
ಹಾವೇರಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಇಬ್ಬರು ಜೈನ್ ಭಟ್ಟಾರಕರು ಜಂಟಿ ಸುದ್ದಿಗೋಷ್ಟಿಯನ್ನ ಏರ್ಪಡಿಸಿದ್ದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ನಾಂದೆಣಿ ಮಠದ ಶಿಷ್ಯ ಪರಂಪರೆಯವರು. ಆ ಮಠಕ್ಕೆ ನಮ್ಮಿಬ್ಬರಲ್ಲಿ ಯಾರಾದರು ಉತ್ತರಾಧಿಕಾರಿಯಾಗಬೇಕು ಅಂತದ್ರಲ್ಲಿ ನಾಂದೆಣಿ ಶಿಷ್ಯ ಪರಂಪರೆ ಅಲ್ಲದವರನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತಿದ್ದಾರೆ ಎಂದು ದೂರಿದರು.
ಅಷ್ಟೇ ಅಲ್ಲ ಆಯ್ಕೆಯ ವಿಚಾರವಾಗಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೆಲವೇ ಕೆಲವು ಜನರು ಸೇರಿಕೊಂಡು ತಮಗೆ ಬೇಕಾದವರನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುತ್ತಿದ್ದಾರೆ. ಇದು ನಮಗೆ ಶ್ರವಣಬೆಳಗೊಳದ ಚಾರಿಕೀರ್ತಿ ಭಟ್ಟಾರಕರು ಮಾಡುತ್ತಿರುವ ಅನ್ಯಾಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.