8 ವರ್ಷದ ಬಾಲಕಿ ದಿವ್ಯಾ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ನಾವುಂದ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಪಿಯು ಕಾಲೇಜು ಹಾಗೂ ನಾವುಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕಾಲೇಜಿನಿಂದ ರ್ಯಾಲಿ ಮೂಲಕ ಹೊರಟ ವಿದ್ಯಾರ್ಥಿಗಳು ಕುಂದಾಪುರದ ನಾವುಂದ ಪಂಚಾಯತ್ ಗೆ ತೆರಳಿ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿಗಳಾದ ಸುನೀತಾ ಹಾಗೂ ಅನುಷಾ ಮಾತನಾಡಿ ಅತ್ಯಾಚಾರವೆಸಗುವ ಕಾಮುಕರಿಗೆ ವಿದೇಶಗಳಲ್ಲಿರುವಂತೆ ಉಗ್ರವಾದ ಶಿಕ್ಷೆ ನೀಡುವಂತಹ ಉಗ್ರ ಕಾನೂನುಗಳನ್ನು ರೂಪಿಸಬೇಕು. ಹೀಗಾದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುವುದಿಲ್ಲ. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಮುಂದಾಳತ್ವವನ್ನು ಸುಪ್ರೀತ್, ಕಾರ್ತಿಕ್, ಭಾರ್ಗವ್, ಪ್ರಣೀತ್, ಮನೋಜ, ಅನುಪಮಾ, ರಕ್ಷಿತಾ ವಹಿಸಿದ್ದರು.