ವಿಮಾ ಹಣ ಬಿಡುಗಡೆಗೆ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ

ಬುಧವಾರ, 4 ಜುಲೈ 2018 (17:37 IST)
ಫಸಲ್ ಭೀಮಾ ಯೋಜನೆಯಲ್ಲಿ   ವಿಮಾ ಹಣವನ್ನು  ರೈತರ ಖಾತೆಗೆ ಜಮಾ ಮಾಡದ ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಯ ವಿರುದ್ಧ ಕೊಪ್ಪಳದ ಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಮೆರವಣಿಗೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯವರಿಗೆ ಎರಡು ಕಿ.ಮಿ. ದೂರ ಸಾಗಿತು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು.

 ವಿಮಾ ಹಣ ಬಿಡುಗಡೆ ಮಾಡಲು ಒತ್ತಾಯಿಸಿ ಹಾಗೂ ತೊಗರಿ ಮತ್ತು ಕಡಲೆ ಬೆಳೆಗಳಿಗೆ ಬೆಂಬಲ ಬೆಲೆಗಳ ಬಾಕಿ ಹಣ ಬಿಡುಗಡೆಗಾಗಿ ಒತ್ತಾಯಿಸಿ ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳ ವಿರುದ್ಧ  ನಡೆದ ಪ್ರತಿಭಟನೆ ಯಲ್ಲಿ  ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್ ಗಡಿಗಿಯ ಲೇಬಗೇರಿ ಜಿಲ್ಲಾ ಪಂಚಾಯತಿ ಕ್ಷೇತ್ರ ದ ಸದಸ್ಯ ಗವಿಸಿದ್ದಪ್ಪ ಕರಡಿ ಭಾಗಿಯಾಗಿದ್ದರು.

ಕೊಪ್ಪಳ ವಿಧಾನ ಸಭಾ ಬ್ಲಾಕ್ ಅಧ್ಯಕ್ಷ ಅಮರೇಶ ಕರಡಿ ಟ್ರ್ಯಾಕ್ಟರ್ ಓಡಿಸುವುದರೊಂದಿಗೆ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆಯಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ