ಗಾ.ಪಂ ಅವ್ಯವಹಾರ ಖಂಡಿಸಿ ಪ್ರೊಟೆಸ್ಟ್​​​​​

ಬುಧವಾರ, 15 ಮಾರ್ಚ್ 2023 (17:08 IST)
ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿಯು ಗ್ರಾಮ ಪಂಚಾಯತಿಯ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ, ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಶಂಕು ಸ್ಥಾಪನೆ ಬೋರ್ಡ್ ಹಾಕಿರುವ ಗ್ರಾಮ ಪಂಚಾಯತಿಯ ನಡೆಯನ್ನ ಖಂಡಿಸಿ, ಸದಸ್ಯ ಸೋಮಶೇಖರ್ ಅಂಬೇಡ್ಕರ್ ಪ್ರತಿಮೆ ಹಿಡಿದು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯತಿಯ ಮುಂದೆ ನಿನ್ನೆ ಬೆಳಿಗ್ಗೆಯಿಂದ ನ್ಯಾಯಕ್ಕಾಗಿ ಧರಣಿ ಕೂತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ