ಎಸ್‍ಐ ಪರ ಸುರಿವ ಮಳೆಯಲ್ಲಿಯೂ ಪ್ರತಿಭಟನೆ ನಡೆಸಿದ ಸಂಘಟನೆಗಳು

ಶನಿವಾರ, 7 ಜುಲೈ 2018 (17:20 IST)
ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಕರ್ತವ್ಯಕ್ಕೆ ಗೈರಾಗಿರುವ ಹೆಬ್ರಿ ಠಾಣಾ ಎಸ್‍ಐ ಮಹಾಬಲ ಶೆಟ್ಟಿ ಅವರ ಮನವೊಲಿಸುವಂತೆ ಆಗ್ರಹಿಸಿ ಹೆಬ್ರಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹೆಬ್ರಿಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆಬ್ರಿ ಠಾಣೆಯ ಎದುರು ಜಮಾಯಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಕುರಿತು ಧಿಕ್ಕಾರ ಕೂಗಿದ್ರು. ಹೆಬ್ರಿ ಠಾಣೆಗೆ ದಕ್ಷ ಅಧಿಕಾರಿ ಮಹಾಬಲ ಶೆಟ್ಟಿ ಅವರು ಬೇಕು. ಯಾವುದೇ ಕಾರಣಕ್ಕೂ ಮಹಾಬಲ ಶೆಟ್ಟಿ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.

ಸೋಮವಾರದ ಒಳಗಾಗಿ ನ್ಯಾಯ ಸಿಗದೆ ಹೋದಲ್ಲಿ ಹೆಬ್ರಿ ಪೇಟೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಎಚ್ಚರಿಸಿದ್ರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಜಾಯ್ ಅಂತೊನಿ, ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರಿಕ್ಷಾ ಚಾಲಕ ಮಾಲಕರ ಸಂಘ, ಟ್ಯಾಕ್ಸಿ ಯೂನಿಯನ್ ಹಾಗೂ ಹೆಬ್ರಿ ನಾಗರಿಕರು ಭಾಗವಹಿಸಿದ್ರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ