ಕೆಪಿಎಸ್ಸಿ ಕಚೇರಿ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ

geetha

ಸೋಮವಾರ, 29 ಜನವರಿ 2024 (14:24 IST)
ಬೆಂಗಳೂರು-ನೂರಾರು ಅಭ್ಯರ್ಥಿಗಳ ಜೊತೆ ಕೆಪಿಎಸ್ಸಿ ಚೆಲ್ಲಾಟವಾಡ್ತಿದ್ದು,Kpsc ವಿರುದ್ಧ ಅಭ್ಯರ್ಥಿಗಳು ತಿರುಗಿಬಿದ್ದಿದ್ದಾರೆ.ಬೆಂಗಳೂರಿನ ಕೆಪಿಎಸ್ಸಿ ಕಚೇರಿ ಮುಂದೆ ಅಭ್ಯರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.ಅಭ್ಯರ್ಥಿ ಗಳ ಅಂತಿಮ ಪಟ್ಟಿ ಕೆಪಿಎಸ್ಸಿ ಬಿಡುಗಡೆ ಮಾಡಿದೆ.2022 ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈಮುಲ್ಯ ಇಲಾಖೆಯಲ್ಲಿ 436 ಹುದ್ದೆಗಳಿಗೆ ಅರ್ಜಿ ಹಾಕಿದ್ದಾರೆ ಆದ್ರೆ ಇಲ್ಲಿಯವರೆಗೆ ಅಂತಿಮ ಪಟ್ಟಿ ಕೆಪಿಎಸ್ಸಿ ಬಿಡುಗಡೆ ಮಾಡಿಲ್ಲ ಹೀಗಾಗಿ ಕೂಡಲೇ ಅಂತಿಮ ಪಟ್ಟಿ ಬಿಡುಗಡೆಗೆ ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ.
 
ಅಗಸ್ಟ್ 17 2023 ರಂದು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದೆ.ಕಳೆದ ಫೆಬ್ರವರಿಯಲ್ಲಿ ಪರೀಕ್ಷೆ ಕೆಪಿಎಸ್ಸಿ ನಡೆಸಿದೆ.ಅಂತಿಮ ಪಟ್ಟಿ ಬಿಡುಗಡೆ ಮಾಡುವರಿಗೂ ಕೆಪಿಎಸ್ಸಿ ಮುಂದೆ ಧರಣಿ ಎಚ್ಚರಿಕೆ ನೀಡಲಾಗಿದೆ.ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಭೇಟಿಗೆ ನೂರಾರು ಅಭ್ಯರ್ಥಿಗಳು ಆಗ್ರಹ ಮಾಡಿದ್ದಾರೆ.ಆದ್ರೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಭೇಟಿಗೆ ಪೊಲೀಸರು ಅವಕಾಶ ನೀಡಿಲ್ಲ ಹೀಗಾಗಿ ಪಿಎಸ್ಸಿ ಮುಂದೆನೇ ನೂರಾರು ಅಭ್ಯರ್ಥಿಗಳಿಂದ ಧರಣಿ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ