ವಿಚಾರಣೆ ವೇಳೆ ಪಿ.ಎಸ್.ಐ. ಮೂತ್ರ ಕುಡಿಸಿದ ಪ್ರಕರಣ ದೂರುದಾರರ ರಾಜಿ ಕೇಸ್ ವಜಾ
ಶನಿವಾರ, 16 ಜುಲೈ 2022 (15:31 IST)
ಆರೋಪಿಯೋರ್ವನ ವಿಚಾರಣೆ ವೇಳೆ ಪಿಎಸ್‌ಐ ಮೂತ್ರ ಕುಡಿಸಿ ಹಿಂಸೆ ನೀಡಿದ್ದರು ಎಂದು ರಾಜ್ಯಾದ್ಯಂತ ಸಂಚಲನ ಮೂಡಿಸಿ ಸುದ್ದಿಯಾಗಿದ್ದ ಪ್ರಕ ರಣವನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಈ ಹಿಂದೆ ಮೂಡಿ ಗೆರೆ ತಾಲೂಕು ಗೋಣಿಬೀಡು ಸಬ್ ಇನ್‌ಸ್ಪೆಕ್ಟರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಜುನ್ ಅವರು ಆರೋಪಿಗೆ ಮೂತ್ರ ಕುಡಿಸಿದ್ದಾರೆನ್ನಲಾದ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜುನ್ ಹಾಗೂ ದೂರುದಾರ ಕಿರಗುಂದ ಗ್ರಾಮದ ಪುನೀತ್ ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.