ಬೆಂಗಳೂರು ಕಾವೇರಿ ನೀರಿನ ದರ ಏರಿಕೆಗೆ ಜನಾಕ್ರೋಶ: ಬಿಟ್ಟಿ ಭಾಗ್ಯಕ್ಕಾಗಿ ಇನ್ನು ಎಷ್ಟು ಕಿತ್ಕೊಳ್ತೀರಿ

Krishnaveni K

ಗುರುವಾರ, 10 ಏಪ್ರಿಲ್ 2025 (12:23 IST)
Photo Credit: X
ಬೆಂಗಳೂರು: ಹಲವು ಬೆಲೆ ಏರಿಕೆಗಳ ಮಧ್ಯೆ ಈಗ ಬೆಂಗಳೂರಿಗರಿಗೆ ಕಾವೇರಿ ನೀರಿನ ದರ ಏರಿಕೆ ಶಾಕ್ ಸಿಕ್ಕಿದೆ. ನೀರಿನ ದರ ಏರಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟಿ ಭಾಗ್ಯಕ್ಕಾಗಿ ಇನ್ನೂ ಎಲ್ಲೆಲ್ಲಿ ಕಿತ್ಕೊಳ್ತೀರಿ ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬೆಲೆ ಏರಿಕೆ ಮಾಡಿದೆ. ಇತ್ತೀಚೆಗಷ್ಟೇ ಬಸ್, ಹಾಲು, ವಿದ್ಯುತ್, ಕಸ ಎಲ್ಲವೂ ದುಬಾರಿ ದುನಿಯಾ ಆಗಿದೆ.

ಇದರ ನಡುವೆ ಬೆಂಗಳೂರಿಗರಿಗೆ ನಮ್ಮ ಮೆಟ್ರೊ ಪ್ರಯಾಣ ದರವೂ ಏರಿಕೆಯಾಗಿತ್ತು. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಈಗ ಕಾವೇರಿ ನೀರಿನ ದರವನ್ನೂ ಪ್ರತೀ ಲೀಟರ್ ಗೆ 1 ಪೈಸೆಯಂತೆ ಏರಿಕೆ ಮಾಡಲಾಗಿದೆ. ಇದರಿಂದ ಕಾವೇರಿ ನೀರಿನ ದರ ಈಗ ಪಾವತಿಸುವುದಕ್ಕಿಂತ 10-15% ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ವೋಟ್ ಹಾಕಿದ್ದಕ್ಕೆ ನಾವು ಅನುಭವಿಸಬೇಕಾಗಿದೆ. ನಿಮ್ಮ ಗ್ಯಾರಂಟಿ ಯೋಜನೆಗಳಿಗಾಗಿ ಇನ್ನೂ ಎಲ್ಲೆಲ್ಲಿ ಕಿತ್ಕೊಳ್ಳಲು ಸಾಧ್ಯವೋ ಅಲ್ಲೆಲ್ಲಾ ಕಿತ್ಕೊಳ್ಳಿ. ನಾಚಿಕೆಯಾಗಬೇಕು ಎಂದು ಜನ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ