ಫೆಬ್ರವರಿ 21ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು ಇಂಗ್ಲಿಷ್, ಸಂಸ್ಕೃತ ಪರೀಕ್ಷೆ ನಡೆಯಲಿದ್ದು, ಮೇ 22 ರಂದು ಕೋರ್ ಸಬ್ಜೆಕ್ಟ್ ಸಮಾಜಶಾಸ್ತ್ರ, ಮೇ 23 ದ್ವೀತಿಯ ಭಾಷೆ ಕನ್ನಡ, ಇಂಗ್ಲಿಷ್, ಮೇ 24 ಕೋರ್ ಸಬ್ಜೆಕ್ಟ್ ಗಣಿತ, ಮೇ 25 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್. ಅರೇಬಿಕ್, ಪರ್ಷಿಯನ್, ಉರ್ದು ಸಂಸ್ಕೃತ, ಕೊಂಕಣಿ, ತುಳು, ಮೇ 26ರಂದು ಕೋರ್ ಸಬ್ಜೆಕ್ಟ್ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜ.6 ಸಂಜೆ ಪ್ರಕಟಿಸಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಜನವರಿ 14ರೊಳಗೆ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮಾರ್ಚ್ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್, ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ಸಮಾಜ ವಿಜ್ಞಾನ, ಏಪ್ರಿಲ್ 6 ತೃತೀಯ ಭಾಷೆ, ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ.