ಬಗೆಹರಿದ ದ್ವಿತೀಯ ಪಿಯುಸಿ ಫಲಿತಾಂಶ ಗೊಂದಲ: ಅಂಕಗಳ ಆಧಾರದಲ್ಲಿ ಫಲಿತಾಂಶ

ಮಂಗಳವಾರ, 20 ಜುಲೈ 2021 (15:57 IST)
ದ್ವಿತೀಯ ಪಿಯುಸಿ ಫಲಿತಾಂಶ ವಿಚಾರದಲ್ಲಿ ಗೊಂದಲದ ಮೇಲೆ ಗೊಂದಲ. ಫಲಿತಾಂಶ ನೀಡುವ ವಿಚಾರದಲ್ಲಿ ದಿನಕ್ಕೊಂದು ಬದಲಾವಣೆಗಳು ನಡೀತಿತ್ತು. ಮೊದಲು A+,A, B+, B, C ಅಂತ ಗ್ರೇಡ್ ಮೂಲಕ ವಿದ್ಯಾರ್ಥಿ ಗಳಿಗೆ ಬಡ್ತಿ ನೀಡಲು ಮುಂದಾಗಿದ್ದ ಶಿಕ್ಷಣ ಇಲಾಖೆ ಈಗ ಫಲಿತಾಂಶಕ್ಕೆ ಮತ್ತೊಂದು ಮೇಜರ್ ಸರ್ಜರಿ ಮಾಡಿದೆ. ಹಳೆ ಪದ್ಧತಿಯಲ್ಲಿ ಅಂದರೆ ಈ ಬಾರಿ ಗ್ರೇಡ್ ಬದಲು ಅಂಕಗಳ ಪರಿಗಣನೆಗೆ ತೆಗೆದುಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಸಂಜೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡಲಿದ್ದು, ಗ್ರೇಡ್ ಬದಲು, ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡಲಿದೆ.
ಈ ಬಾರಿ ಯಾವುದೇ ರ್ಯಾಂಕ್‌ ಇರುವುದಿಲ್ಲ. ಸಿಬಿಎಸ್‌ಇ ಮಾದರಿಯಲ್ಲಿ ಎಸ್ಎಸ್ ಎಲ್‌ಸಿ, ಪಿಯು ಅಂಕ ಪರಿಗಣಿಸಿ ಫಲಿತಾಂಶ ನೀಡಲಿದೆ. ಆದರೆ ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ‌ನಂಬರ್ ಇರುವುದಿಲ್ಲ. ಫಲಿತಾಂಶದ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್‌ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಗಳು Know my  number ಅಂತ ಪಿಯು ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು
ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಹಾಗೂ ಆಯಾ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಲಾಗುತ್ತೆ
ಫಲಿತಾಂಶಕ್ಕು ಮುನ್ನ ತಮ್ಮ ರಿಜಿಸ್ಟರ್‌ ನಂಬರ್ ವಿದ್ಯಾರ್ಥಿಗಳು ಐಡೆಂಟಿಫೈ ಮಾಡಿಕೊಳ್ಳಬೇಕು
ಜನರೇಟ್ ಆದ ರಿಜಿಸ್ಟರ್ ನಂಬರ್ ಚೆಕ್‌ ಮಾಡಿ ರಿಸಲ್ಟ್ ಖಚಿತಪಡಿಸಿಕೊಳ್ಳಬೇಕು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ