ಗೋವಿನ ಜೋಳದ ಹೊಸ ತಳಿಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ!

ಶನಿವಾರ, 4 ಜೂನ್ 2022 (21:05 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದರೂ ಅವರ ನೆನಪು ಅಜರಾಮರ. ಅಭಿಮಾನಿಗಳ ಪಾಲಿಗೆ ಆದರ್ಶವಾಗಿ ಉಳಿದ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಭಿತ್ತನೆ ಬೀಜದ ಹೊಸ ತಳಿ ಲೋಕಾರ್ಪಣೆ ಮಾಡಲಾಗಿದೆ.
ಗಂಗಾ ಕಾವೇರಿ ಕಂಪನಿಯ ಗೋವಿನ ಜೋಳದ ಹೊಸ ತಳಿಗೆ ಪವರ್ ಸ್ಟಾರ್ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದಿದೆ ಕಂಪನಿ.ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಈ ಘಟನೆ ಉದಾಹರಣೆ.
ಪುನೀತ್ ರಾಜ್ ಕುಮಾರ್ ಸವಿನೆನಪಿಗಾಗಿ ಪವರ್ ಸ್ಟಾರ್ ಎಂದು ಹೆಸರಿಡಲಾಗಿದೆ.ಮಾಜಿ ಸಚಿವ ಬಸವರಾಜ ಶಿವಣ್ಣವನವರಿಂದ ಪವರ್ ಸ್ಟಾರ್ ಎಂಬ ಹೊಸ ತಳಿ ಬಿಡುಗಡೆಯಾಗಿದೆ.ಗಂಗಾ ಕಾವೇರಿ ಭಿತ್ತನೆ ಬೀಜಗಳ ವಿತರಕ ಮಹೇಶ್ ಬಣಕಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ