ಗುಂಡಾ ಆಕ್ಟ್ ನಡಿ ಜೈಲು ಸೇರಿದ ಪುನೀತ್ ಕೆರೆಹಳ್ಳಿ
ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪುನೀತ್ ಕೆರೆ ಹಳ್ಳಿಮೇಲೆ ಸಿಸಿಬಿ ಪೊಲೀಸ್ರು ಗುಂಡಾಆಕ್ಟ್ ಜಡಿದಿದ್ದಾರೆ.ಗುಂಡಾ ಆಕ್ಟ್ ಆಡಿಯಲ್ಲಿ ಪುನೀತ್ ಕೆರೆಹಳ್ಳಿಯನ್ನ ಸಿಸಿಬಿ ಆರ್ಗನೈಸ್ ಕ್ರೈಮ್ ವಿಂಗ್ (OCW) ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಪುನೀತ್ ಕೆರೆಹಳ್ಳಿ ಮೇಲೆ ಕೊಲೆ, ಗಲಭೆ. ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್ ದಾಖಲಾಗಿವೆ. ಚಾಮರಾಜಪೇಟೆ. ಎಲೆಕ್ಟ್ರಾನಿಕ್ ಸಿಟಿ, ಸಾತನೂರು, ಮಳವಳ್ಳಿ ಹಾಗೂ ಹಂಪಿ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆ ಹಳ್ಳಿಮೇಲೆ ಕೇಸ್ ದಾಖಲಾಗಿವೆ. ಹಿಂದೂ ಪರ ಹೋರಾಟಗಾರ, ಗೋರಕ್ಷಕ ಅಂತ ಹೇಳಿ ಕೊಂಡಿದ್ದ ಪುನೀತ್ ಕೆರೆ ಹಳ್ಳಿ ಮೇಲೆ ಚಾಮರಾಜ ಪೇಟೆ ಪೊಲೀಸ್ರು ರೌಡಿ ಪಟ್ಟಿ ತೆರೆಯಲು ಸಿದ್ಧತೆ ನಡೆಸಿದ್ರು. ಸದ್ಯ ಸಿಸಿಬಿ ಅಧಿಕಾರಿಗಳು ಗುಂಡಾ ಆಕ್ಟ್ ಅಡಿಯಲ್ಲಿ ಪುನೀತ್ ಕೆರಹಳ್ಳಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.