ಮೆಟ್ರೋ ನಿಲ್ದಾಣದಲ್ಲಿ ಬಸ್ ಮಾಹಿತಿಗೆ QR ಕೋಡ್!

geetha

ಭಾನುವಾರ, 25 ಫೆಬ್ರವರಿ 2024 (20:26 IST)
ಬೆಂಗಳೂರು:ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎರಡು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ.ಇದೇ ಫೆಬ್ರವರಿ 26ರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ BMTC 500 CS ಮತ್ತು 505 ಸಂಖ್ಯೆಗಳಲ್ಲಿ ಎರಡು ಹೊಸ ಮಾರ್ಗಗಳನ್ನು ಪರಿಚಯಿಸುತ್ತಿದೆ.ಮಾರ್ಗ ಸಂಖ್ಯೆ 500 ಸಿಎಸ್ ಸರ್ಜಾಪುರದಿಂದ ದೊಮ್ಮಸಂದ್ರ, ಕೊಡತಿ ಗೇಟ್, ಕೈಕೊಡ್ರಹಳ್ಳಿ, ಇಬ್ಬಲೂರು ಜಂಕ್ಷನ್ ಮತ್ತು ಅಗರ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಕಾರ್ಯನಿರ್ವಹಿಸುತ್ತದೆ.
 
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಸೇವೆಗಳನ್ನು ಪರಿಚಯಿಸಿದ್ದು, ಪ್ರಯಾಣಿಕರು ಫೀಡರ್ ಬಸ್‌ಗಳ ಸಮಯ, ಲೈವ್ ಟ್ರ್ಯಾಕಿಂಗ್ ಮತ್ತು ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಮೆಟ್ರೋ ನಿಲ್ದಾಣದಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ. ಕ್ಯೂಆರ್ ಕೋಡ್ ಸೇವೆ ಫೆಬ್ರವರಿ 19 ರಂದು ಲೈವ್ ಆಗಿದ್ದು, ಪ್ರತಿದಿನ 2,000-3,000 ಪ್ರಯಾಣಿಕರು ಇದನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ