India Pakistan: ಜಮ್ಮು ಕಾಶ್ಮೀರದಲ್ಲಿ ಯುದ್ಧಕ್ಕೆ ತಯಾರಿ: ರಜೆಗಳು ರದ್ದು
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣವಿದೆ. ಎರಡೂ ದೇಶಗಳೂ ತಮ್ಮ ಸೇನೆಯನ್ನು ಸನ್ನದ್ಧಗೊಳಿಸುತ್ತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಡುವೆ ಜಮ್ಮು ಕಾಶ್ಮೀರ ಸರ್ಕಾರ ಸರ್ಕಾರೀ ವೈದ್ಯರು, ಮೆಡಿಕಲ್ ಕಾಲೇಜು ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ರಜೆ ರದ್ದುಗೊಳಿಸಲು ಸೂಚನೆ ನೀಡಿದೆ. ಇದಲ್ಲದೆ ತುರ್ತು ಸೇವೆಗಾಗಿ ಹೆಲ್ಪ್ ಲೈನ್ ನಂಬರ್ ಕೂಡಾ ತೆರೆಯಲಾಗಿದೆ.
ಇನ್ನೊಂದೆಡೆ ಭಾರತೀಯ ಸೇನೆ ಗಡಿ ಪ್ರದೇಶಗಳಲ್ಲಿ ತನ್ನ ಸೇನಾ ವಾಹನಗಳನ್ನು ನಿಯೋಜನೆ ಮಾಡುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಯುದ್ಧಕ್ಕೆ ತಯಾರಿಯೇನೋ ಎಂಬಂತೆ ಭಾಸವಾಗುತ್ತಿದೆ.